×
Ad

ಸಾಲಗಾರರ ಕಿರುಕುಳದಿಂದ ಬೇಸತ್ತು ಪುತ್ರನನ್ನು ಮಾರಾಟ ಮಾಡಲು ಮುಂದಾದ ತಂದೆ; ವಿಡಿಯೊ ವೈರಲ್

Update: 2023-10-28 23:01 IST

Photo: twitter/Benarasiyaa

ಆಲಿಗಢ: ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯಲ್ಲಿ ಸಾಲಗಾರರ ಕಿರುಕುಳದಿಂದ ಬೇಸತ್ತ ತಂದೆಯೊಬ್ಬ ತನ್ನ ಪುತ್ರನನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಕುತ್ತಿಗೆಗೆ ಭಿತ್ತಿ ಫಲಕವನ್ನು ನೇತು ಹಾಕಿಕೊಂಡು ರಾಜಕುಮಾರ್ ಎಂಬ ವ್ಯಕ್ತಿಯು ತನ್ನ ಪತ್ನಿ, ತನ್ನ ಪುತ್ರ ಹಾಗೂ ಪುತ್ರಿಯೊಂದಿಗೆ ಗಾಂಧಿ ಪಾರ್ಕ್ ಎದುರಿನ ಕೂಡು ರಸ್ತೆಯ ಬಳಿ ಕುಳಿತಿರುವ ವಿಡಿಯೋ ವೈರಲ್ ಆಗಿದೆ.

ಆ ಭಿತ್ತಿ ಫಲಕದಲ್ಲಿ, “ನಾನು ನನ್ನ ಪುತ್ರನನ್ನು ಮಾರಾಟ ಮಾಡಬೇಕಿದೆ; ನನ್ನ ಪುತ್ರ ಮಾರಾಟಕ್ಕಿದ್ದಾನೆ” ಎಂದು ಬರೆಯಲಾಗಿತ್ತು.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾಲದ ಸುಳಿಗೆ ಸಿಲುಕಿರುವ ಆ ವ್ಯಕ್ತಿಯು ತನ್ನ ಪುತ್ರನನ್ನು ರೂ. 6ರಿಂದ 8 ಲಕ್ಷಕ್ಕೆ ಮಾರಾಟ ಮಾಡುವ ಒತ್ತಡಕ್ಕೆ ಸಿಲುಕಿದ್ದ ಎಂದು ಹೇಳಲಾಗಿದೆ. ಅಲ್ಲದೆ, ನೆರವಿಗಾಗಿ ನಾನು ಪೊಲೀಸರ ಮೊರೆ ಹೋದರೂ, ಅವರು ನನ್ನ ಮನವಿಗೆ ಗಮನ ನೀಡಲಿಲ್ಲ ಎಂದೂ ಆ ವ್ಯಕ್ತಿ ದೂರಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆಯೆ, ಉತ್ತರ ಪ್ರದೇಶ ಪೊಲೀಸರು ಈ ವಿಷಯದ ಕುರಿತು ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News