×
Ad

ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಿದ ವ್ಯಕ್ತಿ; ಪತ್ನಿ ಸಾವು

Update: 2023-08-24 21:28 IST

ಸಾಂದರ್ಭಿಕ ಚಿತ್ರ.| Photo:NDTV

ಕೃಷ್ಣಗಿರಿ (ತಮಿಳುನಾಡು): ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ಯೂಟ್ಯೂಬ್ ನೋಡಿ ತನ್ನ 27 ವರ್ಷದ ಹೆಂಡತಿಗೆ ಹೆರಿಗೆ ಮಾಡಿಸಲು ಯತ್ನಿಸಿದ್ದು, ಮಹಿಳೆಯು ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಪೊಚ್ಚಂಪಳ್ಳಿ ಸಮೀಪದ ಪುಳಿಯಂಪಟ್ಟಿ ನಿವಾಸಿ ಲೋಕನಾಯಕಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಅವರ ಗಂಡ ಮಾದೇಶ ಎಂಬಾತ ಹೆರಿಗೆ ಮಾಡಿಸಲು ಮುಂದಾಗಿದ್ದಾನೆ. ಆದರೆ, ಹೆರಿಗೆಯ ಬಳಿಕ, ಹೊಕ್ಕುಳ ಬಳ್ಳಿಯನ್ನು ಸರಿಯಾಗಿ ಕತ್ತರಿಸುವಲ್ಲಿ ಆತ ವಿಫಲನಾಗಿದ್ದಾನೆ ಎಂದು ಹೇಳಲಾಗಿದೆ. ಇದರ ಫಲವಾಗಿ, ತೀವ್ರ ರಕ್ತಸ್ರಾವ ಸಂಭವಿಸಿತು.

ಆಗ ಅವರನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕರೆತರಲಾಯಿತು. ಆದರೆ, ಆರೋಗ್ಯ ಕೇಂದ್ರ ತಲುಪುವ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಪೊಲೀಸರು ಸಿಆರ್‌ಸಿಪಿಯ 174ನೇ ಪರಿಚ್ಛೇದದನ್ವಯ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News