ಸರಕಾರದ ಮುಂದೆ ಕೆಲಸದ ಅವಧಿ ಹೆಚ್ಚಳ ಮಾಡುವ ಪ್ರಸ್ತಾವನೆಯಿಲ್ಲ : ಕಾರ್ಮಿಕ ಸಚಿವ ರಾಮೇಶ್ವರ ತೇಲಿ
Update: 2023-12-04 19:38 IST
Photo: X/barandbench
ಹೊಸದಿಲ್ಲಿ : ಸರಕಾರದ ಮುಂದೆ ಕೆಲಸ ಅವಧಿ ಹೆಚ್ಚಳ ಮಾಡುವ ಯಾವುದೇ ಯೋಜನೆಯಿಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವ ರಾಮೇಶ್ವರ ತೇಲಿ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ದೇಶವನ್ನು ಸ್ಪರ್ಧಾತ್ಮಕವಾಗಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಇನ್ಫೋಸಿಸ್ ಸಹಸ್ಥಾಪಕರು ಮಾಡಿದ 70 ಗಂಟೆಗಳ ಕೆಲಸದ ಪ್ರಸ್ತಾಪವನ್ನು ಸರಕಾರ ಮೌಲ್ಯಮಾಪನ ಮಾಡುತ್ತಿದೆಯೇ? ಎಂದು ಸಂಸದರಾದ ಕೋಮಟಿ ರೆಡ್ಡಿ ವೆಂಕಟ ರೆಡ್ಡಿ, ಮನ್ನೆ ಶ್ರೀನಿವಾಸ ರೆಡ್ಡಿ, ಕಾನಮೂರು ರಘು ರಾಮ ಕೃಷ್ಣ ರಾಜು ಅವರು ಸಂಸತ್ತಿನಲ್ಲಿ ಕೇಂದ್ರ ಕಾರ್ಮಿಕ ಸಚಿವರನ್ನು ಪ್ರಶ್ನಿಸಿದ್ದರು. ಸಚಿವರು ಲಿಖಿತ ಉತ್ತರ ನೀಡಿ ಅಂತಹ ಯಾವುದೇ ಪ್ರಸ್ತಾವನೆ ಭಾರತ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.