×
Ad

ಭಾರತವನ್ನು ಗುರಿಯಾಗಿಸಲು ಪಾಕ್ 300 ರಿಂದ 400 ಟರ್ಕಿ ಡ್ರೋನ್‌ಗಳನ್ನು ಬಳಸಿದೆ : ಕರ್ನಲ್ ಸೋಫಿಯಾ ಖುರೇಷಿ

Update: 2025-05-09 19:08 IST

Photo | indiatoday

ಹೊಸದಿಲ್ಲಿ: ಗುರುವಾರ ತಡರಾತ್ರಿ ಜಮ್ಮುಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್‌ನ ಕೆಲ ನಗರಗಳು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ 300 ರಿಂದ 400 ಟರ್ಕಿ ಡ್ರೋನ್‌ಗಳನ್ನು ಹಾರಿಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಪರೇಷನ್ ಸಿಂಧೂರ ಕಾರ್ಯಚರಣೆಯ ಕುರಿತು ಮಾಹಿತಿ ಹಂಚಿಕೊಳ್ಳಲು ಭಾರತೀಯ ವಿದೇಶಾಂಗ ಸಚಿವಾಲಯ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ, ಲಡಾಖ್‌ನ ಸಿಯಾಚಿನ್ ಹಿಮನದಿ ಬೇಸ್ ಕ್ಯಾಂಪ್ ಮತ್ತು ಗುಜರಾತ್‌ನ ಕಚ್ ಪ್ರದೇಶದಲ್ಲಿ ಪಾಕ್ ಡ್ರೋನ್‌ಗಳು ದಾಳಿಗೆ ಪ್ರಯತ್ನಿಸಿದೆ ಎಂದು ಹೇಳಿದರು.

50 ಡ್ರೋನ್‌ಗಳನ್ನು ವಾಯು ರಕ್ಷಣಾ ಬಂದೂಕುಗಳಿಂದ ಹೊಡೆದುರುಳಿಸಲಾಗಿದೆ. 20 ಡ್ರೋನ್‌ಗಳನ್ನು ರೇಡಿಯೋ ಆವರ್ತನಗಳನ್ನು ಜ್ಯಾಮ್ ಮಾಡುವ ಮೂಲಕ ತಟಸ್ಥಗೊಳಿಸಲಾಗಿದೆ. ಹೆಚ್ಚಿನ ಡ್ರೋನ್‌ಗಳು ನಿರಾಯುಧವಾಗಿದ್ದವು. ಇದು ಪಾಕ್ ಭಾರತದ ರಕ್ಷಣಾ ಪಡೆಗಳನ್ನು ಪರೀಕ್ಷಿಸಿರಬಹುದು ಎಂದು ಸೂಚಿಸುತ್ತದೆ. ಇನ್ನು ಕೆಲವು ಡ್ರೋನ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲಾಗಿತ್ತು ಎಂದು ಹೇಳಿದರು.

ಇದಲ್ಲದೆ ಪಾಕ್ ಸೇನೆ ಜಮ್ಮುಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ನಿರಂತರ ಗುಂಡಿನ ದಾಳಿ ಮತ್ತು ಫಿರಂಗಿ ಶೆಲ್ ದಾಳಿ ನಡೆಸಿದೆ. ಇದರಲ್ಲಿ ಓರ್ವ ಸೈನಿಕ ಸೇರಿದಂತೆ 16 ಭಾರತೀಯರು ಮೃತಪಟ್ಟಿದ್ದಾರೆ ಎಂದು ಕರ್ನಲ್ ಸೋಫಿಯಾ ಹೇಳಿದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News