×
Ad

ಕರ್ನಾಟಕದಲ್ಲಿ ಸೋತಿದ್ದೇವೆ, ಏನೇ ಆದರೂ ರಾಜಸ್ಥಾನವನ್ನು ಕಳೆದುಕೊಳ್ಳುವುದಿಲ್ಲ: ಬಿ ಎಲ್‌ ಸಂತೋಷ್‌

Update: 2023-07-11 18:10 IST

ಜೈಪುರ್:‌ “ನಾವು ಕರ್ನಾಟಕದಲ್ಲಿ ಸೋತಿದ್ದೇವೆ ಆದರೆ ಏನೇ ಆಗಲಿ ರಾಜಸ್ಥಾನವನ್ನು ಖಂಡಿತಾ ಕಳೆದುಕೊಳ್ಳುವುದಿಲ್ಲ,” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಅವರು ರಾಜಸ್ಥಾನದ ಸವಾಯಿ ಮಾಧೋಪುರ್‌ನಲ್ಲಿ ಎರಡು ದಿನಗಳ ಬಿಜೆಪಿ ಸಭೆಯಲ್ಲಿ ಸೋಮವಾರ ಹೇಳಿದ್ದಾರೆ ಎಂದು thenewsminute.com ವರದಿ ಮಾಡಿದೆ.

ರಾಜಸ್ಥಾನದ ಚುನಾವಣೆ ಗೆಲ್ಲಲು ಪಕ್ಷದ ಮುಖಂಡರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅವರು ಕರೆನೀಡಿದರು.

ರಾಜಸ್ಥಾನದ ಬಿಜೆಪಿ ಸಭೆ ಭಾಗವಾಗಿ ನಡೆದ ಎಂಟು ಅಧಿವೇಶನಗಳಲ್ಲಿ ವಂಶ ರಾಜಕೀಯ, ಓಲೈಕೆ ರಾಜಕಾರಣ, ರೈತರ ಸಾಲ ಮನ್ನಾ ವಿಚಾರ, ಭ್ರಷ್ಟಾಚಾರ ಮುಂತಾದ ವಿಚಾರಗಳು ಚರ್ಚೆಗೆ ಬಂದವು.

ಸಭೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸಿ ಪಿ ಜೋಷಿ ಸುದ್ದಿಗಾರರ ಜೊತೆ ಮಾತನಾಡಿದರು. ಬಿಜೆಪಿಯು ಕಾಂಗ್ರೆಸ್‌ ಪಕ್ಷದ ದುರಾಡಳಿತ, ಜಂಗಲ್‌ ರಾಜ್‌, ಭ್ರಷ್ಟಾಚಾರದ ವಿರುದ್ಧ ಹೋರಾಡಲಿದೆ ಎಂದು ಅವರು ಹೇಳಿದರು.

ವಿಜಯ್‌ ಸಂಕಲ್ಪ್‌ ಸಭೆಯಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಚುನಾವಣೆಯಲ್ಲಿ ಕೆಳಗಿಳಿಸಲು ನಿರ್ಣಯಿಸಲಾಯಿತು. ಇದು ಸುಳ್ಳುಗಳ ಮತ್ತು ಲೂಟಿಗಳ ಸರ್ಕಾರ ಎಂದೂ ಬಿಜೆಪಿ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News