×
Ad

ಪ್ರಿಯಕರನೊಂದಿಗೆ ಸೇರಿ ಮೂರು ಮಕ್ಕಳನ್ನು ಮುಳುಗಿಸಿ ಸಾಯಿಸಿದ ಮಹಿಳೆ; ಸತ್ತಂತೆ ನಟಿಸಿ ಬಚಾವಾದ ಮತ್ತೊಂದು ಮಗು

Update: 2024-06-29 15:56 IST

PC : NDTV 

ಲಕ್ನೋ: ಉತ್ತರ ಪ್ರದೇಶದ ಔರಯಾ ಎಂಬಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ಮೂರು ಮಕ್ಕಳನ್ನು ನದಿಯಲ್ಲಿ ಮುಳುಗಿಸಿ ಸಾಯಿಸಿದ ಘಟನೆ ನಡೆದಿದೆ. ಆಕೆಯ ಇನ್ನೋರ್ವ ಮಗ ಈ ಸಂದರ್ಭ ಸತ್ತಂತೆ ನಟಿಸಿ ಬಚಾವಾದ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಪ್ರಿಯಾಂಕ ಮತ್ತು ಆಕೆಯ ಪ್ರಿಯಕರ ಮತ್ತು ಮೈದುನ ಆಶಿಷ್‌ನನ್ನು ಬಂಧಿಸಲಾಗಿದೆ.

ಜೂನ್‌ 27ರಂದು ಬೆಳಿಗ್ಗೆ ಮಹಿಳೆ ಸೆಂಗೂರು ನದಿ ಸಮೀಪ ಬಂದು ಇಬ್ಬರು ಮಕ್ಕಳನ್ನು ಮುಳುಗಿಸಿದರೆ ಇನ್ನೊಂದು ಮಗುವನ್ನು ನೀರಿಗೆಸೆದಿದ್ದಳು. ಇನ್ನೋರ್ವ ಎಂಟು ವರ್ಷದ ಮಗ ಸತ್ತಂತೆ ನಟಿಸಿ ಬಚಾವಾಗಿದ್ದ. ಆತನನ್ನು ವ್ಯಕ್ತಿಯೊಬ್ಬ ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಹಿಳೆ ತನ್ನ ಪತಿಯ ನಿಧನಾನಂತರ ಮೈದುನನೊಂದಿಗೆ ವಾಸವಾಗಿದ್ದಳು. ಆದರೆ ಆಕೆಯ ಮಕ್ಕಳನ್ನು ನೋಡಿಕೊಳ್ಳಲು ಆತ ನಿರಾಕರಿಸಿದ ನಂತರ ಇಬ್ಬರೂ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News