×
Ad

ಮತ್ತೆ ಅಪಾಯದ ಮಟ್ಟ ಮೀರಿದ ಯುಮುನಾ ನದಿ: ದಿಲ್ಲಿಗೆ ಮತ್ತೊಮ್ಮೆ ನೆರೆಯ ಭೀತಿ

Update: 2023-07-23 22:39 IST

Photo: ಯಮುನಾ ನದಿ | PTI 

ಹೊಸದಿಲ್ಲಿ: ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, ಹಾಥಿನಿಕುಂಡ್ ಆಣೆಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಿರುವುದರಿಂದ ರವಿವಾರ ರಾಜಧಾನಿ ದಿಲ್ಲಿಯಲ್ಲಿ ಯಮುನಾ ನದಿಯು ಮತ್ತೊಮ್ಮೆ ಅಪಾಯದ ಮಟ್ಟವನ್ನು ಮೀರಿ ಹರಿಯತೊಡಗಿದೆ.

ಯಮುನಾ ನದಿ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆಯಾಗಿರುವುದು, ಕಳೆದ ವಾರದ ನೆರೆಯಿಂದ ತತ್ತರಿಸಿರುವ ರಾಜಧಾನಿಯ ತಗ್ಗುಪ್ರದೇಶಗಳಲ್ಲಿ ನಡೆಯುತ್ತಿರುವ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಿಗೆ ತೊಂದರೆಯುಂಟು ಮಾಡುವ ಸಾಧ್ಯತೆಯಿುದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಥಿನಿಕುಂಡ್ ಅಣೆಕಟ್ಟಿನಿಂದ ಯಮುನಾ ನದಿಗೆ 2 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿರುವುದರಿಂದ ದಿಲ್ಲಿ ಸರಕಾರವು ಕಟ್ಟೆಚ್ಚರವನ್ನು ವಹಿಸಿದೆ ಎಂದು ಕಂದಾಯ ಸಚಿವೆ ಅತಿಶಿ ಅವರು ಶನಿವಾರ ತಿಳಿಸಿದ್ದಾರೆ. ಒಂದು ವೇಳೆ ನದಿ ನೀರಿನ ಮಟ್ಟವು 206.7 ಮೀಟರ್ಗೆ ಏರಿಕೆಯಾದಲ್ಲಿ ಯಮುನಾ ನದಿ ದಡದ ಬಯಲುಪ್ರದೇಶಗಳ ಕೆಲವು ಭಾಗವು ಜಲಾವೃತಗೊಳ್ಳಲಿದೆಯೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡಗಳಲ್ಲಿ ಜುಲೈ 25ರವರೆಗೆ ಭಾರೀ ಮಳೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ರವಿವಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News