ಫ್ರಾನ್ಸ್ ಗಲಭೆ: 700ಕ್ಕೂ ಹೆಚ್ಚು ಜನರಿಗೆ ಜೈಲುಶಿಕ್ಷೆ
ಪ್ಯಾರಿಸ್: ಫ್ರಾನ್ಸ್ ನಲ್ಲಿ ಕಳೆದ ತಿಂಗಳಾಂತ್ಯದಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿ 700ಕ್ಕೂ ಹೆಚ್ಚು ಜನರಿಗೆ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ದೇಶದ ನ್ಯಾಯ ಇಲಾಖೆಯ ಸಚಿವ ಎರಿಕ್ ಡ್ಯುಪೋಂಡ್ ಮೊರೆಟ್ಟಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ದೃಢವಾದ ಮತ್ತು ವ್ಯವಸ್ಥಿತವಾದ ಪ್ರಕ್ರಿಯೆಯನ್ನು ಹೊಂದಲು ಇದು ಬಹಳ ಮುಖ್ಯವಾಗಿತ್ತು. ನಾವು ರಾಷ್ಟ್ರೀಯ ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ಅತ್ಯಗತ್ಯವಾಗಿತ್ತು ಎಂದವರು ಹೇಳಿದ್ದಾರೆ. ಗಲಭೆಗಳಿಗೆ ಸಂಬಂಧಿಸಿ ಇದುವರೆಗೆ ಒಟ್ಟು 1.278 ತೀರ್ಪುಗಳನ್ನು ನೀಡಲಾಗಿದ್ದು 95%ದಷ್ಟು ಪ್ರತಿವಾದಿಗಳು ವಿಧ್ವಂಸಕ ಕೃತ್ಯ, ಪೊಲೀಸ್ ಅಧಿಕಾರಿಗಳ ಮೇಲೆ ದಾಳಿಗೆ ಸಂಬಂಧಿಸಿದ ಆರೋಪಗಳಿಗಾಗಿ ಶಿಕ್ಷೆಗೆ ಒಳಗಾಗಿದ್ದಾರೆ. ಗಲಭೆಗೆ ಸಂಬಂಧಿಸಿ 3,700ಕ್ಕೂ ಹೆಚ್ಚು ಬಂಧನವಾಗಿದ್ದು, ಇವರ ಸರಾಸರಿ ವರ್ಷ 17. ಅಪ್ರಾಪ್ತ ವಯಸ್ಸಿನ ಆರೋಪಿಗಳ ವಿಚಾರಣೆಗೆ ಪ್ರತ್ಯೇಕ ಬಾಲನ್ಯಾಯಾಲಯ ಸ್ಥಾಪಿಸ
ಲಾಗಿತ್ತು. ನ್ಯಾಯಾಂಗ ಪ್ರಕ್ರಿಯೆಯ ನ್ಯಾಯಸಮ್ಮತತೆ ಮತ್ತು ಕಸ್ಟಡಿ ಶಿಕ್ಷೆಗಳ ಭಾರೀ ಬಳಕೆಯ ಬಗ್ಗೆ ಆರೋಪಿಗಳ ಪರ ನ್ಯಾಯವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳ ವರದಿ ಹೇಳಿದೆ.