ಹರಪನಹಳ್ಳಿ : ಪಟ್ಟಣದ ವಿವಿಧೆಡೆ ವಿದ್ಯುತ್ ತಂತಿಗಳಿಗೆ ತಾಗಿಕೊಂಡಿದ್ದ ರೆಂಬೆ-ಕೊಂಬೆಗಳಿಂದ ಅಪಾಯದ ಆತಂಕ ಸೃಷ್ಟಿಯಾಗಿರುವ ಕುರಿತು ಜುಲೈ 8ರಂದು ವಾರ್ತಾ ಭಾರತಿಯಲ್ಲಿ ಪ್ರಕಟವಾಗಿದ್ದ ವರದಿಗೆ ಕೊನೆಗೂ ಬೆಸ್ಕಾಂ ಸ್ಪಂದಿಸಿದೆ. ವರದಿ ಪ್ರಕಟವಾಗಿ ಮೂರು ತಿಂಗಳ ಬಳಿಕ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಸಿಬ್ಬಂದಿ, ವಿದ್ಯುತ್ ತಂತಿಗಳಿಗೆ ತಾಗಿದ್ದ ರೆಂಬೆ-ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸಿದ್ದಾರೆ.

ವಿದ್ಯುತ್ ತಂತಿಗಳಿಗೆ ತಾಗಿದ್ದ ರೆಂಬೆ-ಕೊಂಬೆ

ಗಳನ್ನು ತೆರವುಗೊಳಿಸುವಲ್ಲಿ ನಗರಸಭೆ ಮತ್ತು ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಪ್ರಶ್ನಿಸಿ, ಸಾರ್ವಜನಿಕರ ಸುರಕ್ಷತೆಗೆ ಎದುರಾಗಿದ್ದ ಅಪಾಯದ ಕುರಿತುವರದಿ ಪ್ರಕಟಿಸಲಾಗಿತ್ತು.

ವರದಿ ಪ್ರಕಟವಾಗಿ ಬರೋಬ್ಬರಿ ಮೂರು ತಿಂಗಳ ಬಳಿಕವಾದರೂ ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಸಾರ್ವಜನಿಕರ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor