DCRE ಠಾಣೆಗಳಿಗೆ ಬಲ ಬರಲಿ
ಕಳೆದ ಎಪ್ರಿಲ್ ತಿಂಗಳಿಂದ ಎಸ್‌ಸಿ/ಎಸ್‌ಟಿ ಪ್ರಕರಣಗಳನ್ನು ದಾಖಲಿಸುವ, ತನಿಖೆ ಮಾಡುವ ಹೊಣೆಯನ್ನು ನೀಡಿ ದೌರ್ಜನ್ಯ ಪ್ರಕರಣಗಳ ತನಿಖೆಯ ಗುಣಮಟ್ಟ ಕಾಲಮಿತಿಯೊಳಗೆ ಹಾಗೂ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿನ ನಿರ್ಬಂಧದ ಬಗ್ಗೆ ಪ್ರಯತ್ನ ಪಟ್ಟ ರಾಜ್ಯ ಸರಕಾರ ಬೆಂಗಳೂರು ನಗರ ಸೇರಿದಂತೆ ಜಿಲ್ಲೆಗೊಂದು ಆಅಖಇ ಪೊಲೀಸ್ ಠಾಣೆಗಳನ್ನು ತೆರೆದಿರುತ್ತದೆ. (ಒಟ್ಟು 33) ಆದರೆ ಪ್ರತೀ ಜಿಲ್ಲೆಯಲ್ಲಿ 4-5 ಜನ ಡಿವೈಎಸ್‌ಪಿಯವರು ಬೆಂಗಳೂರು ನಗರದಲ್ಲಿ 16 ಜನ ಎಸಿಪಿಗಳು ಮಾಡುವ ಕೆಲಸವನ್ನು 22 ಜನ ಡಿವೈಎಸ್‌ಪಿಯವರು ಒಟ್ಟು ಕೆಲಸವನ್ನು ಮಾಡಲು ಸಾಧ್ಯವೇ? ಇದರಿಂದ ತನಿಖಾ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವೇ? ತನಿಖಾ ವೇಗ ಹೆಚ್ಚಿಸಲು ಸಾಧ್ಯವೇ? ಸದರಿ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಾಧ್ಯವೇ? ಹಾಗೂ ಎಸ್‌ಸಿ/ಎಸ್‌ಟಿ ಜನರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೇ ಎಂಬ ಪ್ರಶ್ನೆ ಈಗಿನ ಆಅಖಇಯ ಈ ಕಾರ್ಯ ವೈಖರಿಯನ್ನು ನೋಡಿ ಅನುಮಾನ ಪಡುವಂತಾಗಿದೆ.
ದಿನನಿತ್ಯ ಯಾರಾದರೂ ನೊಂದ ವ್ಯಕಿಗಳು ಕುಂದು ಕೊರತೆ ಹೇಳಿಕೊಳ್ಳಲು ಠಾಣೆಗೆ ಹೋದಾಗ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ‘‘ನಮ್ಮಲ್ಲಿ ಅಧಿಕಾರಿಗಳಿಲ್ಲ, ಸಿಬ್ಬಂದಿಯಿಲ್ಲ’’ ಎಂಬ ನೆಪವನ್ನು ಹೇಳುವ ಪರಿಸ್ಥಿತಿ ಅನಿವಾರ್ಯವಾಗಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನರ ಉದ್ಧಾರ, ಅವರ ಕಲ್ಯಾಣ ಕಾಯ್ದೆಯ ಈ ಕೋರಿಕೆ ಸಾಧ್ಯವೇ?
ನೂರಾರು ಕೋಟಿ ಹಣ ವ್ಯಯ ಮಾಡಿ ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಮಾಡಿರುವ ವ್ಯವಸ್ಥೆ ಸುಗಮವಾಗಿ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಈ ರೀತಿ ಇದ್ದಲ್ಲಿ, ಇದಕ್ಕೆ ಪರಿಹಾರ ಏನು? ಅಧಿಕಾರಿಗಳ ಸ್ಪಂದನೆ ಏನು? ಎಂಬುದರ ಬಗ್ಗೆ ಚರ್ಚಿಸುವುದಾದರೆ ಈ ಕೆಳಕಂಡ ಅಂಶಗಳನ್ನು ಪರಿಗಣಿಸಬಹುದಾಗಿದೆ.
ಬಹುತೇಕ ಜಿಲ್ಲೆಯ ಪೊಲೀಸ್ ಅಧಿಕಾರಿಗಳು DCRE ಪೊಲೀಸ್ ಠಾಣೆಗಳಿಗೆ ನಿಗಾ ವಹಿಸುತ್ತಿಲ್ಲ. ಇನ್ನು ಕೆಲವೊಂದು ಜಿಲ್ಲೆಯ ಅಧಿಕಾರಿಗಳು ಮಂಜೂರು ಆಗಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸುತ್ತಿಲ್ಲ. ಉದಾಹರಣೆಗೆ ಬೆಂಗಳೂರು ನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಇತ್ಯಾದಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಎಸ್‌ಸಿ/ಎಸ್‌ಟಿ ಪ್ರಕರಣಗಳು ದಾಖಲಾಗುತ್ತಿದ್ದು ಈ ಜಿಲ್ಲೆಗಳಿಂದಲೇ ಅಧಿಕಾರಿಗಳ ನಿರಾಶಾದಾಯಕ ಸ್ಪಂದನೆಯಾಗುತ್ತಿರುತ್ತದೆ. ಎಷ್ಟೋ ಜನ ಸಿಬ್ಬಂದಿ ಆಅಖಇ ಘಟಕಕ್ಕೆ ಬರುವ ಇಚ್ಛೆ ಇದ್ದರೂ ಸಹ ಅವರನ್ನು ನಿಯೋಜಿಸಲು ಹಿಂದೇಟು ಹಾಕಲಾಗುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ಅಷ್ಟೇ ಅಲ್ಲದೆ ಕೆಲಸದ ಒತ್ತಡವನ್ನು ಪರಿಗಣಿಸಿ ಅತಿಹೆಚ್ಚಿನ ಒತ್ತಡವಿರುವ ತುಮಕೂರು, ಕೋಲಾರ, ದಾವಣಗೆರೆ, ಬೆಳಗಾವಿ, ಧಾರವಾಡ, ಬೆಂಗಳೂರು ನಗರಗಳಿಗೆ ಎರಡು ಠಾಣೆ ಹಾಗೂ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಹೆಚ್ಚಿನ ಸಿಬ್ಬಂದಿ ಮಂಜೂರಾತಿಯ ಅವಶ್ಯಕತೆ ಇದೆ. ಸಂಬಂಧ ಪಟ್ಟ ಘಟಕಗಳಿಗೆ ಪೊಲೀಸ್ ಅಧಿಕಾರಿಗಳನ್ನು ತಾತ್ಕಾಲಿಕವಾಗಿ ಅನ್ಯ ಕರ್ತವ್ಯದ (OOD)ಆಧಾರದ ಮೇಲೆ ನಿಯೋಜಿಸಿ ಮೇಲ್ಕಂಡ ಸಮಸ್ಯೆಗಳನ್ನು ಬಗೆಹರಿಸುವುದು ಮೇಲಧಿಕಾರಿಗಳ ಆದ್ಯ ಕರ್ತವ್ಯವಾಗಿದೆ.
ಹಾಗೆಯೇ ಇನ್ನೂ ಕೆಲವೊಂದು ಜಿಲ್ಲೆಗಳಲ್ಲಿ ಎಸ್‌ಪಿ, ಡಿಎಸ್‌ಪಿ, ಪಿಐ, ಪಿಎಸ್‌ಐ ಅಧಿಕಾರಿಗಳನ್ನು ನಿಯೋಜಿಸಲು ಸಂಬಂಧಪಟ್ಟ ಅಧಿಕಾರಿಗಳು ಮೀನಾ ಮೇಷ ಮಾಡುತ್ತಿರುವುದು ವಿಷಾದಕರವಾಗಿದೆ. DCRE ಘಟಕವು ಪ್ರಕರಣಗಳನ್ನು ತನಿಖೆಯ ಜೊತೆ, ಜಾತಿ ವಿಚಾರಣೆ ಅರ್ಜಿಗಳು, ಜಾತಿ ವಿಚಾರಣೆ ಅಪರಾಧಿಗಳ ತನಿಖೆ, ಕುಂದು ಕೊರತೆ ಅರ್ಜಿಗಳ ವಿಚಾರಣೆ SCP/TSP ಅನುದಾನ ಸಮರ್ಪಕ ನಿರ್ವಹಣೆ ಇತ್ಯಾದಿಗಳನ್ನು ಮಾಡಬೇಕಾಗುತ್ತದೆ.
DCRE ಪ್ರಕರಣಗಳು ಅಭಿಯೋಜನೆಗೆ ನಿರ್ಬಂಧಿಸಿದಂತೆ ಆಯೋಜಕರು ಸಹ ಸರಿಯಾಗಿ ಸಹಕರಿಸುತ್ತಿಲ್ಲ. ಪ್ರಕರಣಗಳಲ್ಲಿ ಆರೋಪಿಗಳು ಜಾಮೀನನ್ನು ಸುಲಭವಾಗಿ ಪಡೆಯುವಂತೆ ಪರೋಕ್ಷ ಸಹಕಾರ ರೀತಿಯಲ್ಲಿ ಅವರ ಕಾರ್ಯ ವೈಖರಿ ಕಾಣಿಸುತ್ತಿದೆ. ಹಾಗೆಯೇ ಉಚ್ಚ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳಲ್ಲಿ ಸುಲಭ ರೀತಿಯಲ್ಲಿ ತಡೆಯಾಜ್ಞೆ ಸಿಗುತ್ತಿರುವುದು ವಿಷಾದಕರ ಸಂಗತಿ.
ಈ ಬಗ್ಗೆ ಒಬ್ಬ ನುರಿತ ವಿಶೇಷ ಅಭಿಯೋಜಕರನ್ನು ನೇಮಿಸುವುದು ಅಗತ್ಯವಾಗಿದೆ. ಅಂತೆಯೇ ಪೊಲೀಸ್ ಇಲಾಖೆಯ ಬೇರೆ ಘಟಕಗಳಲ್ಲಿ ವಿಶೇಷ ಭತ್ತೆ ವಿಶೇಷ ಸೌಲಭ್ಯಗಳು ಇದ್ದಂತೆ DCRE ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ಕೂಡಲೇ ಅನುಕೂಲ ಸಿಗುವಂತಾಗಲಿ. ಮೇಲ್ಕಂಡ ಎಲ್ಲಾ ಅಂಶಗಳ ಜೊತೆ ಅತ್ಯಂತ ತುರ್ತಾಗಿ ಮಂಜೂರಾಗಿರುವ ಅಧಿಕಾರಿ, ಸಿಬ್ಬಂದಿ ನಿಯೋಜನೆ ಮಾಡಬೇಕು ಮತ್ತು ಹೆಚ್ಚಿನ ಒತ್ತಡವಿರುವ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ OOD ಕರ್ತವ್ಯದ ಆಧಾರದ ಮೇಲೆ ನಿಯೋಜಿಸಬೇಕಾಗಿದೆ.
ಮೇಲ್ಕಂಡ ಅಂಶಗಳನ್ನು ಪರಿಪೂರ್ಣಗೊಳಿಸಿದ್ದಲ್ಲಿ DCRE ಪೊಲೀಸ್ ಠಾಣೆಗಳ ಕಾರ್ಯ ಸುಧಾರಣೆಯಾಗುತ್ತವೆ.