ಸುಪ್ರೀಂ ಕೋರ್ಟ್‌ನಲ್ಲಿ ಶೂ ಎಸೆತ: ಅಸಹಿಷ್ಣುತೆಯ ಹೊಸ ಆಯಾಮಗಳು
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಹಿರಿಯ ವಕೀಲರೊಬ್ಬರು ಶೂ ಎಸೆದ ಘಟನೆಯು ದೇಶದ ಆತ್ಮಸಾಕ್ಷಿಯನ್ನು ಕಲಕಿದೆ. ಸುಪ್ರೀಂ ಕೋರ್ಟ್ ಆವರಣದಲ್ಲಿಯೇ ನಡೆದ ಈ ಘಟನೆಯು, ವೈಯಕ್ತಿಕ ಕೋಪದ ಕ್ಷಣವನ್ನು ಮಾತ್ರವಲ್ಲದೆ, ಭಾರತದ ಕುದಿಯುತ್ತಿರುವ ಜಾತಿ, ಧಾರ್ಮಿಕ ಮತ್ತು ಸೈದ್ಧಾಂತಿಕ ಉದ್ವಿಗ್ನತೆಯ ಗೊಂದಲದ ಪ್ರತಿಬಿಂಬವನ್ನು ಬಹಿರಂಗಪಡಿಸುತ್ತದೆ.
ಖಜುರಾಹೊ ದೇವಾಲಯದಲ್ಲಿ ಹಾನಿಗೊಳಗಾದ ವಿಷ್ಣು ವಿಗ್ರಹವನ್ನು ಪುನಃಸ್ಥಾಪಿಸಬೇಕೆಂದು ಕೋರಿದ ಅರ್ಜಿಯನ್ನು ವಜಾಗೊಳಿಸಿದ ನಂತರ, 71 ವರ್ಷದ ವಕೀಲ ವಕೀಲ ರಾಕೇಶ್ ಕಿಶೋರ್ ಅವರು ಸಿಜೆಐ ಮೇಲೆ ಶೂ ಎಸೆದ ಈ ಆಘಾತಕಾರಿ ಘಟನೆ ಸಂಭವಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಮೂರ್ತಿ ಗವಾಯಿ ನೀಡಿದ್ದ ತೀರ್ಪನ್ನು ‘ಸನಾತನ ಧರ್ಮಕ್ಕೆ ಅವಮಾನ’ ಎಂದು ಅರ್ಥೈಸಿ ತಿರುಚಲಾಯಿತು. ತನ್ನ ಕೃತ್ಯಕ್ಕೆ ದೈವಿಕ ಪ್ರೇರಣೆ ಎಂದು ಹೇಳಿಕೊಂಡ ರಾಕೇಶ್ ಕಿಶೋರ್, ಕೋಪಗೊಂಡು, ‘ಸನಾತನ ಕಾ ಅಪಮಾನ್, ನಹಿ ಸಹೇಗಾ ಹಿಂದೂಸ್ತಾನ್!’ ಎಂದು ಕೂಗುತ್ತಾ ಶೂ ಎಸೆದರು. ಒಂದು ಸಣ್ಣ ಕಾನೂನು ವಿವಾದವು ಧಾರ್ಮಿಕ ನಂಬಿಕೆಯ ನೆಪವಾಯಿತು. ಕಿಶೋರ್ ಅವರ ಗುರಿಯಾಗಿದ್ದ ನ್ಯಾಯಮೂರ್ತಿ ಗವಾಯಿ ಭಾರತದ ಎರಡನೇ ದಲಿತ ಮತ್ತು ಮೊದಲ ಬೌದ್ಧ ಮುಖ್ಯ ನ್ಯಾಯಾಧೀಶರು ಎಂಬ ಅಂಶವು ಪರಿಸ್ಥಿತಿಗೆ ಜಾತಿ ಆಯಾಮವನ್ನು ಪರಿಚಯಿಸಿತು.
ಭಾರತದ ಅತ್ಯುನ್ನತ ನ್ಯಾಯಾಂಗ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ಮತ್ತು ಮೊದಲ ಬೌದ್ಧ ನ್ಯಾಯಮೂರ್ತಿ ಗವಾಯಿ ಗಮನಾರ್ಹವಾದ ಶಾಂತತೆಯನ್ನು ಪ್ರದರ್ಶಿಸಿದರು. ಘಟನೆಯನ್ನು ನಿರ್ಲಕ್ಷಿಸುವಂತೆ ಅವರು ನ್ಯಾಯಾಲಯದ ಸಿಬ್ಬಂದಿಗೆ ಸೂಚನೆ ನೀಡಿದರು ಮತ್ತು ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ವಿನಂತಿಸಿದರು. ಪೊಲೀಸ್ ಠಾಣೆಯಲ್ಲಿ ಕಿಶೋರ್ ಅವರನ್ನು ಸಂಕ್ಷಿಪ್ತವಾಗಿ ಪ್ರಶ್ನಿಸಲಾಯಿತು-ಆದರೆ ಅವರ ಶೂ ಮರಳಿಸಿ ಬಿಡುಗಡೆ ಮಾಡಲಾಯಿತು. ಇದು ಭಾರತದ ಆಯ್ದ ನ್ಯಾಯ ಜಾರಿಯನ್ನು ಒತ್ತಿಹೇಳುತ್ತದೆ. ಒಂದು ವೇಳೆ ದಾಳಿಕೋರ ಮುಸ್ಲಿಮ್ ಹೆಸರನ್ನು ಹೊಂದಿದ್ದರೆ ಅಧಿಕಾರಿಗಳ ಪ್ರತಿಕ್ರಿಯೆ ಗಮನಾರ್ಹವಾಗಿ ಬದಲಾಗುತ್ತಿತ್ತಲ್ಲವೇ?
ಅದೇ ಸಮಯದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಅವಹೇಳನಕಾರಿ ಕಮೆಂಟ್‌ಗಳನ್ನು ಮಾಡಿದ ಬಲಪಂಥೀಯ ಪ್ರಭಾವಿ ಅಜಿತ್ ಭಾರ್ತಿ ಆನ್‌ಲೈನ್‌ನಲ್ಲಿ, ಶಿಕ್ಷೆಯಿಲ್ಲದಿರುವಿಕೆಯ ಬಗ್ಗೆ ಹೆಮ್ಮೆಪಡುತ್ತಾ, ‘ಸರಕಾರ ನಮ್ಮದು; ವ್ಯವಸ್ಥೆ ನಮ್ಮದು’ ಎಂದು ಹೇಳಿದರು. ಅವರ ಹೇಳಿಕೆಗಳು ಆತಂಕಕಾರಿ ವಾಸ್ತವವನ್ನು ಎತ್ತಿ ತೋರಿಸಿದವು-ನಿರ್ದಿಷ್ಟ ಸೈದ್ಧಾಂತಿಕ ಸಂಬಂಧಗಳು ಹೊಣೆಗಾರಿಕೆಯಿಂದ ವಿನಾಯಿತಿ ನೀಡುತ್ತವೆ.
ಈ ಘಟನೆಯನ್ನು ಭಾರತದಲ್ಲಿ ಹೆಚ್ಚುತ್ತಿರುವ ಜಾತಿ ಮತ್ತು ಧಾರ್ಮಿಕ ಧ್ರುವೀಕರಣದ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು. ಅಂಬೇಡ್ಕರ್‌ವಾದಿಯಾದ ನ್ಯಾಯಮೂರ್ತಿ ಗವಾಯಿ ಅವರ ತಾಯಿ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಿರಾಕರಿಸಿದರು, ಅವರು ತಮ್ಮ ಅಭಿಪ್ರಾಯಗಳಿಗೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಅವರ ನಿರಾಕರಣೆ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಪ್ರತಿಧ್ವನಿಸಿತು. ಹಿಂದೂ ರಾಜ್ ಭಾರತಕ್ಕೆ ವಿಪತ್ತನ್ನುಂಟು ಮಾಡುತ್ತದೆ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಪ್ರಸ್ತುತ, ಸನಾತನ ಧರ್ಮ ಎಂಬ ಪದವು ಹಿಂದೂ ಧರ್ಮವನ್ನು ರಾಜಕೀಯ ಗುರುತಿನ ಲಾಂಛನವಾಗಿ ಬದಲಾಯಿಸಿದೆ. ಇದು ಅಂಬೇಡ್ಕರ್ ಅವರಿಗಿದ್ದ ಆತಂಕಗಳನ್ನು ಈಗ ಗಮನಾರ್ಹವಾಗಿ ಹೆಚ್ಚಿಸಿದೆ.
ಪ್ರಸ್ತುತ ‘ಹಿಂದೂ’ ಎಂಬ ಪದವನ್ನು ‘ಸನಾತನ’ ಪದದೊಂದಿಗೆ ಬದಲಾಯಿಸುವ ಸೈದ್ಧಾಂತಿಕ ಅಭಿಯಾನವನ್ನು ಗಮನಕ್ಕೆ ತರುತ್ತದೆ. ಇದು ಈಗ ಬಲಪಂಥೀಯ ರಾಜಕೀಯದ ಕೂಗಾಗಿದೆ. ‘‘ಗರ್ವ್ ಸೇ ಕಹೋ ಹಮ್ ಹಿಂದೂ ಹೈ’’ (ನಾವು ಹಿಂದೂಗಳು ಎಂದು ಹೆಮ್ಮೆಯಿಂದ ಹೇಳಿ) ಎಂಬ ಘೋಷಣೆಯು ‘‘ಸನಾತನ ಕಾ ಅಪಮಾನ್ ನಹಿ ಸಹೇಗ ಹಿಂದೂಸ್ತಾನ್’’ ಆಗಿ ರೂಪಾಂತರಗೊಂಡಿದೆ-ಇದು ಆರೆಸ್ಸೆಸ್‌ನ ಬಹುಕಾಲದ ಹಿಂದೂ ರಾಷ್ಟ್ರ ದೃಷ್ಟಿಕೋನಕ್ಕೆ ಹೊಂದಿಕೆಯಾಗುವ ರೂಪಾಂತರವಾಗಿದೆ. ಈ ಸಂದರ್ಭದಲ್ಲಿ, ಕಿಶೋರ್ ಅವರ ಕೃತ್ಯವು ಸಾಂಕೇತಿಕ ಅರ್ಥವನ್ನು ಪಡೆಯುತ್ತದೆ. ಅಸ್ಪಶ್ಯತೆಯ ಸಾಂಪ್ರದಾಯಿಕ ಗುರುತು-ಶೂ ದಲಿತ ಮುಖ್ಯ ನ್ಯಾಯಾಧೀಶರ ವಿರುದ್ಧ ಅವಮಾನದ ಸಾಧನವಾಯಿತು. ಇದು ನ್ಯಾಯಾಂಗ ಹೇಳಿಕೆಯ ಮೇಲಿನ ಕೋಪವನ್ನು ಮಾತ್ರವಲ್ಲದೆ ಅಧಿಕಾರದ ಸಂಸ್ಥೆಗಳೊಳಗಿನ ದಲಿತರು ಮತ್ತು ಬಹುಜನರ ಸಾಮಾಜಿಕ ಚಲನಶೀಲತೆಗೆ ಆಳವಾದ ಪ್ರತಿರೋಧವನ್ನು ಪ್ರತಿಬಿಂಬಿಸುತ್ತದೆ.
ಭಾರತದ ಮುಖ್ಯ ನ್ಯಾಯಾಧೀಶರ ಮೇಲೆ ಎಸೆಯಲ್ಪಟ್ಟ ಶೂ ಕೇವಲ ದೈಹಿಕ ದ್ವೇಷದ ಕೃತ್ಯವಾಗಿರಲಿಲ್ಲ; ಅದು ಭೀಮಸ್ಮತಿ ಯ ಮೇಲೆ ಮನುಸ್ಮತಿಯನ್ನು ಪ್ರತಿಪಾದಿಸುವ ಸೈದ್ಧಾಂತಿಕ ಘೋಷಣೆಯನ್ನು ಪ್ರತಿನಿಧಿಸುತ್ತದೆ. ಭಾರತದಲ್ಲಿ ಜಾತಿ ಆಧಾರಿತ ಹಿಂಸಾಚಾರ ನಿರಂತರವಾಗಿ ಮುಂದುವರಿದಿದೆ ಎನ್ನುತ್ತಾರೆ ವಿದ್ವಾಂಸ ಆನಂದ್ ತೇಲ್ತುಂಬ್ಡೆ. ವಾರ್ಷಿಕವಾಗಿ ದಲಿತರ ವಿರುದ್ಧ 55,000ಕ್ಕೂ ಹೆಚ್ಚು ದೌರ್ಜನ್ಯ ಘಟನೆಗಳು ದಾಖಲಾಗುತ್ತವೆ.
ಒಂದು ವ್ಯಂಗ್ಯಾತ್ಮಕ ತಿರುವು, ದಲಿತ ಜನಾಂಗಕ್ಕೆ ಸೇರಿದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ‘‘ದಲಿತರೇ, ಇತ್ತೀಚೆಗೆ ಆರೆಸ್ಸೆಸ್ ಭೀಮ್ ಸ್ಮತಿಗೆ ಬದ್ಧವಾಗಿದೆ, ಮನು ಸ್ಮತಿಗೆ ಅಲ್ಲ’’ ಎಂದು ಪ್ರತಿಪಾದಿಸಿದ್ದರು. ಆದರೆ ಕಿಶೋರ್ ಅವರ ಕೃತ್ಯ ಮತ್ತು ಅದನ್ನು ಖಂಡಿಸುವಲ್ಲಿ ಸಂಘ ನಾಯಕತ್ವದ ಮೌನ ಬೇರೆಯದೇ ಆದ ಸೂಚನೆಯನ್ನು ನೀಡುತ್ತದೆ. ಕಿಶೋರ್ ಅವರ ಹಿಂಸಾತ್ಮಕ ಕ್ರಮವು ಅಂತಹ ಹೇಳಿಕೆಯನ್ನು ಅಮಾನ್ಯಗೊಳಿಸಿತು. ಸಹಿಷ್ಣುತೆಯ ಮೇಲ್ನೋಟದ ಕೃತ್ಯಗಳ ಹೊರತಾಗಿಯೂ, ಮನುಸ್ಮತಿಯ ತತ್ವಗಳು-ಶ್ರೇಣೀಕೃತ ವ್ಯವಸ್ಥೆ, ಹೊರಗಿಡುವಿಕೆ ಮತ್ತು ಭಿನ್ನಾಭಿಪ್ರಾಯಕ್ಕೆ ಶಿಕ್ಷೆ-ಆಳವಾಗಿ ಉಳಿದಿವೆಯೆಂದು ಅದು ವಿವರಿಸುತ್ತದೆ. ಮಾತಿಗೆ ಹಿಂಸೆ ಎಂಬ ಸಿದ್ಧಾಂತ-ನಂಬಿಕೆಗೆ ಅವಮಾನ ಮಾಡಿದವರ ಮೇಲೆ ದಾಳಿ ಮಾಡುವುದು-ಸನಾತನ ಚೌಕಟ್ಟಿನೊಳಗೆ ಜೀವಂತವಾಗಿದೆ, ಇದು ಅಂಬೇಡ್ಕರ್ ಅವರ ಭೀಮ್‌ಸ್ಮತಿ ಮತ್ತು ಬುದ್ಧನ ಕರುಣೆಯ ಸಮಾನತೆಯ ಮನೋಭಾವಕ್ಕೆ ವಿರುದ್ಧವಾಗಿದೆ.
ತನ್ನ ವಿರೋಧಾತ್ಮಕ ತೀರ್ಪುಗಳಿಗಾಗಿ ಈಗಾಗಲೇ ಪರೀಕ್ಷೆಗೆ ಒಳಪಟ್ಟಿರುವ ಭಾರತದ ನ್ಯಾಯಾಲಯವು ಈಗ ಆಂತರಿಕ ನೈತಿಕ ಸವಾಲನ್ನು ಎದುರಿಸುತ್ತಿದೆ. ಸಾಧ್ವಿ ಪ್ರಜ್ಞಾ ಠಾಕೂರ್ ಅವರಂತಹ ಧಾರ್ಮಿಕ ಮತ್ತು ರಾಜಕೀಯ ವ್ಯಕ್ತಿಗಳನ್ನು ಖುಲಾಸೆಗೊಳಿಸುವುದು ಮತ್ತು ಉಮರ್ ಖಾಲಿದ್ ಅವರಂತಹ ಕಾರ್ಯಕರ್ತರನ್ನು ಬಂಧಿಸುವುದರಿಂದ ಈ ವ್ಯವಸ್ಥೆಯ ಪಕ್ಷಪಾತದ ಬಗ್ಗೆ ಕಳವಳ ಇದೆ.
ದ್ವೇಷ ಮತ್ತು ಶಿಕ್ಷೆಯ ಕೊರತೆಯ ಗದ್ದಲದ ನಡುವೆ, ನ್ಯಾಯಮೂರ್ತಿ ಗವಾಯಿ ಅವರ ಶಾಂತತೆಯು ಸ್ಪಷ್ಟವಾಗಿ ಹೊರಹೊಮ್ಮಿತು. ಅವರ ಕ್ಷಮೆಯು ಬುದ್ಧನ ಸಹಾನುಭೂತಿ ಮತ್ತು ಅಂಬೇಡ್ಕರ್ ಅವರ ಸಾಂವಿಧಾನಿಕ ನೀತಿಶಾಸ್ತ್ರಕ್ಕೆ ಬೆಲೆ ತಂದಿದೆ. ಪ್ರತೀಕಾರವನ್ನು ತ್ಯಜಿಸುವ ಮೂಲಕ, ಅವರು ಭೀಮ್ ಸ್ಮತಿಯ ದೃಢತೆಯನ್ನು, ನ್ಯಾಯವು ದ್ವೇಷವನ್ನು ಮೀರಬೇಕು ಎಂಬ ತತ್ವವನ್ನುಉದಾಹರಣೆಯಾಗಿ ತೋರಿಸಿದರು.
ಈ ಘಟನೆಯು ಕೇವಲ ನ್ಯಾಯಾಲಯದ ನಿರೂಪಣೆಯನ್ನು ಮೀರಿದೆ; ಇದು ಭಾರತದ ಛಿದ್ರಗೊಂಡ ಆತ್ಮಸಾಕ್ಷಿಯನ್ನು ಪ್ರತಿಬಿಂಬಿಸುತ್ತದೆ. ಮುಖ್ಯ ನ್ಯಾಯಮೂರ್ತಿಗಳ ಮೇಲೆ ಗುರಿಯಿಟ್ಟ ಶೂ ಅವರಿಗೆ ವೈಯಕ್ತಿಕವಾಗಿ ತಗಲಿಲ್ಲ, ಬದಲಾಗಿ ಗಣರಾಜ್ಯದ ನೈತಿಕ ಅಡಿಪಾಯದ ಮೇಲೆ ದಾಳಿ ಮಾಡಿದೆ. ಜಾತಿ ಹೆಮ್ಮೆ ಮತ್ತು ಧಾರ್ಮಿಕ ಮತಾಂಧತೆ ನ್ಯಾಯಾಂಗವನ್ನು ವ್ಯಾಪಿಸಿದಾಗ, ಪ್ರಜಾಪ್ರಭುತ್ವವೇ ರಾಜಿಯಾಗುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ನೆನಪಿಸುತ್ತದೆ.
ನ್ಯಾಯಾಂಗವು ತನ್ನ ಸವಾಲುಗಳ ಹೊರತಾಗಿಯೂ ಪುನಃಸ್ಥಾಪನೆಯ ಸಾಮರ್ಥ್ಯವನ್ನು ಉಳಿಸಿಕೊಂಡಿದೆ ಎಂಬ ಆಶಾವಾದವನ್ನು ನ್ಯಾಯಮೂರ್ತಿ ಗವಾಯಿ ಅವರ ಸಮತೋಲನವು ಹುಟ್ಟುಹಾಕುತ್ತದೆ. ನಿಜವಾದ ಶಕ್ತಿ ಪ್ರತೀಕಾರದಲ್ಲಿ ಅಲ್ಲ, ವೈಚಾರಿಕತೆಯಲ್ಲಿ ನೆಲೆಸಿದೆ ಎಂದು ಅವರ ಮೌನದ ಮೂಲಕ ಭಾರತಕ್ಕೆ ನೆನಪಿಸಲಾಯಿತು. ಭೀಮ್ ಸ್ಮತಿಯಲ್ಲಿ ನೆಲೆಗೊಂಡಿರುವ ಚೈತನ್ಯವು ಶಾಶ್ವತವಾಗಿದ್ದರೆ, ಭಾರತದ ಸಮಾನತೆಯ ದುರ್ಬಲ ಭರವಸೆಯೂ ಸಹ ಮುಂದುವರಿಯಬಹುದು.