×
Ad

ರಾಯಚೂರು | ಜೂ.27ರಂದು ಚಿಕ್ಕ ಹೊನ್ನಕುಣಿಯಲ್ಲಿ ದೇವೇಗೌಡರ ಪುತ್ಥಳಿ ಅನಾವರಣ

Update: 2025-06-23 12:08 IST

ರಾಯಚೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಜೂ.27ರಂದು ದೇವದುರ್ಗಕ್ಕೆ ಆಗಮಿಸಲಿದ್ದು, ಚಿಕ್ಕ ಹೊನ್ನಕುಣಿ ಬಳಿ ನಿರ್ಮಿಸಲಾಗಿರುವ ದೇವೇಗೌಡರ ಪುತ್ಥಳಿ ಅನಾವರಣ ಹಾಗೂ ದೇವದುರ್ಗ ಪಟ್ಟಣದ ಬಸವೇಶ್ವರ ಮೈದಾನದಲ್ಲಿ ಆಯೋಜಿಸಿರುವ 'ಜನರೊಂದಿಗೆ ಜನತಾ ದಳ' ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ 58 ದಿನಗಳ ಕಾಲ 110 ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಆಯೋಜಿಸಲು ಪಕ್ಷ ನಿರ್ಧರಿಸಿದೆ. ಜೂ.26ರಂದು ನಿಖಿಲ್ ಕುಮಾರಸ್ವಾಮಿ ಸಿಂಧನೂರು ನಗರಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ ಮಾನ್ವಿ ಪಟ್ಟಣಕ್ಕೆ ಆಗಮಿಸಿ ರಾತ್ರಿ ರಾಯಚೂರು ನಗರಕ್ಕೆ ಆಗಮಿಸಲಿದ್ದಾರೆ. 27ರಂದು ದೇವದುರ್ಗದಲ್ಲಿ ನಡೆಯಲಿರುವ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮಲ್ಲಣ್ಣ ನಾಗರಾಳ ಅವರು ದೇವೇಗೌಡರ ಪುತ್ಥಳಿ ನಿರ್ಮಿಸಿದ್ದು, ಪುತ್ಥಳಿ ಅನಾವರಣ ಗೊಳಿಸಲಾಗುತ್ತದೆ. ನಂತರ ದೇವದುರ್ಗ ಪಟ್ಟಣದಲ್ಲಿ ನಡೆಯಲಿರುವ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಪಾಟೀಲ ಅತ್ತನೂರು, ಎನ್.ಶಿವಶಂಕರ, ಮಲ್ಲಣ್ಣ ನಾಗರಾಳ, ಸಿದ್ದಣ್ಣ ತಾತ, ಸಿದ್ದನಗೌಡ ಮೂಡಲಗುಂಡಾ, ಲಕ್ಷ್ಮೀಪತಿ ಗಾಣಧಾಳ, ನರಸಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News