×
Ad

ರಾಯಚೂರು| ವಿಶೇಷ ಚೇತನರ ಕನಿಷ್ಠ ವೇತನ ಜಾರಿ ಕುರಿತು ಅಧಿವೇಶನದಲ್ಲಿ ಧ್ವನಿಯೆತ್ತಲು ಶಾಸಕರಿಗೆ ಮನವಿ

Update: 2025-12-04 18:14 IST

ಸಿಂಧನೂರು: ಕರ್ನಾಟಕ ರಾಜ್ಯ ವಿಶೇಷಚೇತನರ ನಗರ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯ ಸಮಿತಿ ಹಾಗೂ ಎಂಆರ್‌ಡಬ್ಲೂ, ವಿಆರ್‌ಡಬ್ಲೂ, ಯುಆರ್‌ಡಬ್ಲೂ ತಾಲೂಕು ಘಟಕದಿಂದ ವಿಶೇಷಚೇತನರ ಕನಿಷ್ಠ ವೇತನ ಜಾರಿ ಮಾಡುವಂತೆ ಒತ್ತಾಯಿಸಿ ಡಿ.8 ರಿಂದ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕಳೆದ 17 ವರ್ಷಗಳಿಂದ ವಿಕಲಚೇತನರ ಇಲಾಖೆಯಡಿ ಎಂಆರ್ ಡಬ್ಲೂ, ವಿಆರ್‌ಡಬ್ಲೂ, ಯುಆರ್‌ಡ ಬ್ಲೂಗಳಾಗಿ ತಾಲೂಕು, ನಗರ, ಗ್ರಾಮ ಪಂಚಾಯತಿಗಳಲ್ಲಿ ಸರಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ವಿಕಲಚೇತನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪ್ರಸ್ತುತ ನಮಗೆ ಸರಿಕಾರ ನೀಡುತ್ತಿರುವ ಗೌರವಧನ ತುಂಬಾ ಕಡಿಮೆ ಇದ್ದು, ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಕುಟುಂಬ ಸಾಗಿಸುವುದು ಕಷ್ಟವಾಗಿದೆ. 2016ರ ವಿಕಲಚೇತನರ ಕಾಯ್ದೆಯಂತೆ ಕನಿಷ್ಠ ವೇತನ ನೀಡಲು ವಿಧಾನಸಭೆಯ ಅಧಿವೇಶನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಜಾರಿ ಮಾಡಬೇಕು ಎಂದು ವಿಕಲಚೇನರ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಹನುಮಂತ ಗಿಣಿವಾರ ಆಗ್ರಹಿಸಿದರು.  

ಈ ವೇಳೆ ಕೆ.ಬೀರಪ್ಪ ಗೊರೇಬಾಳ, ವೀರಭದ್ರಪ್ಪ ಜಾಲಿಹಾಳ,  ಪ್ರಕಾಶ್, ಭೀಮರಾಯ್, ತಿಮ್ಮಣ್ಣ, ಚಂದಪ್ಪ, ರಮೇಶ ಗಾಂಧಿನಗರ, ಸಾಬಮ್ಮ, ಬಸಪ್ಪ ಗುಜ್ಜಳ್ಳಿ, ಪ್ರಭಾಕರ್, ಹನುಮಂತಪ್ಪ ಹೊಸಳ್ಳಿ, ಕೃಷ್ಣಪ್ಪ ವಳಬಳ್ಳಾರಿ, ಗಂಗಣ್ಣ, ರಾಮಣ್ಣ, ದೇವೇಂದ್ರಪ್ಪ ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News