×
Ad

ಜ.30 ಫ್ಯಾಸಿಸ್ಟ್ ವಿರೋಧಿ ಸಮಾವೇಶ: ಆರ್. ಮಾನಸಯ್ಯ

Update: 2025-01-23 21:24 IST

ಲಿಂಗಸುಗೂರು: ಬಿಜೆಪಿ ಬೆಂಬಲಿತ ಆರೆಸ್ಸೆಸ್ ಸಂಘಟನೆಯ 100 ವರ್ಷ ಪೂರ್ಣಗೊಳ್ಳುವ ಭಾಗವಾಗಿ ಅನೇಕ‌ ಕಾರ್ಯಕ್ರಮಗಳನ್ನು‌‌ ಆಯೋಜಿಸಿ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡಮೇಲು ಮಾಡಲು ಹೊರಟಿದೆ. ಪ್ರಜಾಪ್ರಭುತ್ವ, ಜಾತ್ಯಾತಿತತೆ ಹಾಗೂ ಗಣತಂತ್ರ ವ್ಯವಸ್ಥೆ ಉಳಿಯುವ ಎಲ್ಲರೂ ಒಂದಾಗಬೇಕು ಎಂದು ಮನುವಾದಿ-ಫ್ಯಾಸಿಸ್ಟ್ ವಿರೋಧಿ ಜನತಾ ರಂಗದ‌ ಸಹ ಸಂಚಾಲಕ ಆರ್ ಮಾನಸಯ್ಯ ತಿಳಿಸಿದರು.

ಅವರಿಂದು ಲಿಂಗಸುಗೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಆರೆಸ್ಸೆಸ್ ನಾಯಕರು‌ ಸಂವಿಧಾನವನ್ನು ಸ್ಮಾರಕ ಭವನದಲ್ಲಿಟ್ಟು ಪೂಜಿಸುವುದಕ್ಕೆ ಸೀಮಿತಗೊಳಿಸಲಿದೆ.‌ ಸಂವಿಧಾನ‌ ರದ್ದು ಮಾಡಿ ಅದರ ಜಾಗದಲ್ಲಿ ಬ್ರಾಹ್ಮಣವಾದಿ ಧರ್ಮಶಾಸ್ತ್ರವಾದ ಮನುಸ್ಮೃತಿಯನ್ನು ಜಾರಿಗೆ ತರಲು ಹೊರಟಿದೆ. ಭಾರತವನ್ನು ಹಿಂದೂರಾಷ್ಟ್ರ(ವೈದಿಕ ಧರ್ಮದೇಶ) ಎಂದು ಘೋಷಿಸಲು ಸಜ್ಜಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಣಿಪುರ ಹಾಗೂ ಛತ್ತೀಸ್‌ಗಡ ರಾಜ್ಯದಲ್ಲಿ ಈಗಾಗಲೇ ಹಿಂದೂರಾಷ್ಟ್ರ ತಾಲೀಮು ಶುರುವಾಗಿದೆ‌ ಎಂದು ಹೇಳಿದರು.

ಆರೆಸ್ಸೆಸ್ ಈ ವರ್ಷದುದ್ದಕ್ಕೂ ಶತ ಜಯಂತಿ ಆಚರಿಸಲು ಮುಂದಾಗಿದೆ. ಇದು ಕೇವಲ ಸಂಘದ ಆಚರಣೆಯಾಗಿ ಇರುವುದಿಲ್ಲ, ಇಡೀ ಸರ್ಕಾರವೇ ಈ ಆಚರಣೆಗೆ ಮುಂದಾಗಿದೆ. ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಮುಂದಿಟ್ಟಿಕೊಂಡು ಆರೆಸ್ಸೆಸ್ ಸಂಘ ಪರಿವಾರವೇ ಕೇಂದ್ರ ಸರ್ಕಾರವನ್ನು ಮುನ್ನೆಡೆಸುತ್ತಿದೆ. ನಾಗರಿಕರಲ್ಲಿ‌‌ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮನುವಾದಿ-ಫ್ಯಾಸಿಸ್ಟ್‌ ವಿರೋದಿ ಜನತಾ ರಂಗದಿಂದ ಜ.30 ರಂದು ಲಿಂಗಸುಗೂರಿನಲ್ಲಿ ಆಯ್ದಕ್ಕಿ ಲಕ್ಕಮ ಮೈದಾನದ ಜಗದ್ಗುರು ತಿಂಥಿಣಿ ಮೌನೇಶ್ವರ ಗುರು ಖಾದರಿಪೀರ ವೇದಿಕೆಯಲ್ಲಿ ಸಮಾವೇಶ ಅಯೋಜಿಸಲಾಗಿದೆ‌ ಎಂದು ತಿಳಿಸಿದರು

ಆರೆಸ್ಸೆಸ್ ದಾಳಿಗೆ ಪ್ರಾಣ ಬಲಿಕೊಟ್ಟ ಎಂ.ಎಂ.ಕಲಬುರ್ಗಿ, ಗೌರಿಲಂಕೇಶ, ದಾಬೋಲ್ಕರ, ಪನ್ಸಾರೆ ಹಾಗೂ ಗುಜರಾತ್, ದಿಲ್ಲಿ ಮಣಿಪುರದಲ್ಲಿ ಕೊಲೆಗೀಡಾದ ಸಾವಿರಾರು ಜನರ ಶೋಕ ದಿನವೆಂದು ನಾವು ಆಚರರಿಸಲ್ಲಿದ್ದೇವೆ. ಸಮಾವೇಶದಲ್ಲಿ ನಾಡಿನ ಹೆಸರಾಂತ ಚಳವಳಿಗಾರರು, ಧಾರ್ಮಿಕ ಮುಖಂಡರು, ವಿವಿಧ ಮಠಗಳ ಧರ್ಮ ಗುರುಗಳು ಭಾಗವಹಿಸಲಿದ್ದು, ಜನರು ಬಹುಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾವೇಶದ ಸಂಯೋಜಕ ಸಿ.ದಾನಪ್ಪ ಮಸ್ಕಿ, ಸಮಾವೇಶದ ಸಂಯೋಜಕ ಎಂ.ಗಂಗಾಧರ, ಎಂ.ಡಿ.ಅಮೀರ್ ಅಲಿ, ವಿಜಯರಾಣ ಸಿರವಾರ, ಆದೇಶ ನಗನೂರು, ಎಂ.ನಿಸರ್ಗ, ಬಸವರಾಜ ಬಡಿಗೇರ, ಗಂಗಾಧರ ನಾಯಕ, ಖಾಲಿದ್ ಚಾವುಸ್, ಗುಡದಪ್ಪ ಭಂಡಾರಿ ಸೇರಿ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News