ರಾಯಚೂರು | ಲಾರಿ-ಬೈಕ್ ಢಿಕ್ಕಿ : ವ್ಯಕ್ತಿ ಮೃತ್ಯು
Update: 2025-12-18 19:56 IST
ಸಾಂದರ್ಭಿಕ ಚಿತ್ರ
ರಾಯಚೂರು: ಸಿರವಾರ ಪಟ್ಟಣದ ಹೊರ ವಲಯದ ದೇವದುರ್ಗ-ಸಿರವಾರ ಮುಖ್ಯ ರಸ್ತೆಯಲ್ಲಿ ಲಾರಿ ಮತ್ತು ಬೈಕ್ ಢಿಕ್ಕಿಯಾಗಿದ್ದು, ಬೈಕ್ ಸವಾರ ಮಲ್ಲಿಕಾರ್ಜುನ ಕುರುಬರು (35) ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಈ ಕುರಿತು ಸಿರವಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಪ್ರಭಾರಿ ಪಿಎಸ್ ಐ ಬಸನಗೌಡ ಹಣಗಿ ತಿಳಿಸಿದ್ದಾರೆ.