ದೇವದುರ್ಗ | ಪೊಲೀಸ್ ಅಧಿಕಾರಿಗಳಿಂದ ಅಪರಾಧ ಮಾಸಾಚರಣೆ
Update: 2025-12-18 19:10 IST
ದೇವದುರ್ಗ: ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತ ದೇವದುರ್ಗ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಎಲ್ಲಾ ಆಟೊ ಚಾಲಕರನ್ನು ಕರೆಸಿ ಸಂಚಾರ ನಿಯಮಗಳ ಬಗ್ಗೆ, ರಸ್ತೆ ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ ಮಾಡಲಾಯಿತು.
ಲಿಂಗಸೂಗುರು ಡಿ.ವೈ.ಎಸ್.ಪಿ ದತ್ತಾತ್ರೇಯ ಕಾರ್ನಡ್ ಮಾತನಾಡಿ, ಯುವಜನತೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ನಷೆ, ಅಮಲು ಪದಾರ್ಥಗಳ ಸೇವೆನೆ ಮಾಡಿ ಆಟೊ ಚಲಾಯಿಸಬಾರದು, ಚಾಲಕರು ಕಡ್ಡಾಯವಾಗಿ ಪರವಾನಗಿ ತೆಗೆದುಕೊಳ್ಳಬೇಕು ಎಂದರು.
ಮಾದಕ ವಸ್ತು ಮಾರಾಟ, ಸಾಗಣೆ, ಹಾಗೂ ಸೇವನೆ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಲು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಮಂಜುನಾಥ. ಪಿ.ಐ, ಹನುಮಂತ,ಪ್ರಕಾಶ್,ಶಿವಣ್ಣ ಪೊಲೀಸ್ ಸಿಬ್ಬಂದಿಗಳು ಇದ್ದರು.