ಸೆ.5 ರಂದು ರಾಯಚೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ : ಡಾ.ಸಿದ್ದಲಿಂಗ ಸ್ವಾಮಿ
ರಾಯಚೂರು: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆ.1ರಿಂದ ಅ.1ವರಗೆ ರಾಜ್ಯಾದ್ಯಂತ ಬಸವ ಸಂಸ್ಕೃತಿ ಆಭಿಯಾನ ಆಯೋಜಿಸಲಾಗಿದ್ದು, ಸೆ.5 ರಂದು ನಗರಕ್ಕೆ ಆಗಮಿಸಲಿದೆ ಎಂದು ಚಿಕ್ಕಸೂಗೂರು ಚೌಕಿ ಮಠದ ಡಾ.ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿಉದ್ದೇಶಿಸಿ ಮಾತನಾಡಿ, ಸೆ.5 ರಂದು ಬೆಳಿಗ್ಗೆ 10 ಗಂಟೆಗೆ ಅಭಿಯಾನಕ್ಕೆ ಸ್ವಾಗತ ನಡೆಯಲಿದ್ದು, ಷಟಸ್ಥಳ ಧ್ವಜಾರೋಹಣ, ನಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ, ಸಂಜೆ 4 ಗಂಟೆಗೆ ಸಾಮರಸ್ಯದ ನಡಿಗೆ ಕಾರ್ಯಕ್ರಮ ನಡೆಯಲಿದೆ. ಬಸವ ವೃತ್ತದಿಂದ ಗಂಜ ಕಲ್ಯಾಣ ಮಂಟಪದವರಗೆ ನಡೆಯಲಿದೆ. ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಲಿಂಗಾಯತ ಪೀಠಾಧಿಪತಿಗಳ ಒಕ್ಕೂಟ ಅಧ್ಯಕ್ಷರಾದ ಬಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು, ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಗದಗನ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಡಾ.ಎಸ್.ಶಿವರಾಜ ಪಾಟೀಲ್ ವಹಿಸಲಿದ್ದಾರೆ. ಶರಣರ ರಾಜಕೀಯ ಪರಿಕಲ್ಪನೆ ವಿಷಯ ಕುರಿತು ಡಾ.ಬಸವರಾಜ ಸಾದರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶರಣ ತತ್ವದ ವೈಶಿಷ್ಟತೆ ಶ್ರೀ ಗುರುಬಸವ ಮಹಾಸ್ವಾಮೀ ಉಪನ್ಯಾಸ ನೀಡಲಿದ್ದಾರೆ. ಅನೇಕ ರಾಜಕೀಯ ನಾಯಕರುಗ, ವಿವಿಧ ಸಮಾಜಗಳ ಅಧ್ಯಕ್ಷರುಗಳು,ಬಸವಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.
ಬಸವ ಸಂಸ್ಕೃತಿ ಅಭಿಯಾನದ ಸಂಯೋಜಕ ಹರವಿ ನಾಗನಗೌಡ ಮಾತನಾಡಿ, ಬಸವ ಕಲ್ಯಾಣದಿಂದ ಪ್ರಾರಂಭವಾಗಿರುವ ಬಸವ ಸಂಸ್ಕೃತಿ ಅಭಿಯಾನ ಸೆ.5 ರಂದು ನಗರಕ್ಕೆ ಆಗಮಿಸಲಿದ್ದು, ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಗಂಜ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಸಮಾಜ ಅಧ್ಯಕ್ಷ ಶರಣಭೂಪಾಲನ ಗೌಡ, ರಾಚನಗೌಡ ಕೋಳೂರು, ನಾಗರಾಜ ಮಸ್ಕಿ, ಡಾ.ಸರ್ವಮಂಗಳ ಸಕ್ರಿ, ಸಜ್ಜನಶೆಟ್ಟಿ ಸೇರಿ ಅನೇಕರಿದ್ದರು.