×
Ad

ರಾಯಚೂರು ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಬಿಜೆಪಿ ಮರುಪರಿಶೀಲಿಸಬೇಕು: ಆಕಾಂಕ್ಷಿ ಬಿ.ವಿ.ನಾಯಕ್

Update: 2024-03-29 19:42 IST

Photo: X/@ANI

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರ(ಎಸ್‍ಟಿ ಮೀಸಲು)ದ ಟಿಕೆಟ್ ಹಾಲಿ ಸಂಸದ ರಾಜಾ ಅಮರೇಶ್ವರ್ ನಾಯಕ ನೀಡಿದ್ದರಿಂದ ಆಕ್ರೋಶಗೊಂಡಿರುವ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ವಿ.ನಾಯಕ್, ವರಿಷ್ಠರು ಮತ್ತೊಮ್ಮೆ ಸಮೀಕ್ಷೆ ಮಾಡಬೇಕು. ಟಿಕೆಟ್ ವಿಚಾರದಲ್ಲಿ ಮರುಪರಿಶೀಲನೆ ಮಾಡಬೇಕು ಎಂದು ಕೋರಿದ್ದಾರೆ.

ಶುಕ್ರವಾರ ನಗರದಲ್ಲಿ ತಮ್ಮ ಬೆಂಬಲಿಗರು ಮತ್ತು ಅಭಿಮಾನಿಗಳು ಪ್ರತ್ಯೇಕ ಚಿಂತನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಆತುರ ಹಾಗೂ ಉದ್ವೇಗದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಇನ್ನು ಸ್ವಲ್ಪ ಕಾದು ನೋಡುವೆ. ನನಗೂ ಮತ್ತು ವರಿಷ್ಠರಿಗೆ ಸಮಯ ಇದೆ. ಪಕ್ವವಾದ ಸಮಯಕ್ಕಾಗಿ ಕಾಯುತ್ತಿರುವೆ. ಮತ್ತೊಮ್ಮೆ ನನ್ನ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಕರೆಯುವೆ. ಆ ಬಳಿಕ ಸೂಕ್ತ ತೀರ್ಮಾನ ಮಾಡುವೆ ಎಂದು ಬಿ.ವಿ.ನಾಯಕ್ ತಿಳಿಸಿದರು.

‘ಸದ್ಯಕ್ಕೆ ನಾನು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವೆ. ಇದು ನನ್ನ ಮನೆ. ಈ ಮನೆಯಲ್ಲಿದ್ದುಕೊಂಡೇ ಹೋರಾಟ ಮಾಡುತ್ತಿರುವೆ. ನನಗೆ ಅವಕಾಶ ಮಾಡಿಕೊಡಿ. ಎಲ್ಲರಂತೆ ನಾನು ಬ್ಲಾಕ್‍ಮೇಲ್ ರಾಜಕಾರಣ ಮಾಡುವುದಿಲ್ಲ. ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಂಡ ನಿರ್ಧಾರ ನನಗೆ ಬೇಸರ ತರಿಸಿದೆ ಎಂದು ಅವರು ತಿಳಿಸಿದರು.

ಅಭ್ಯರ್ಥಿ ಪ್ರಕಟಿಸಿರುವ ಬಗ್ಗೆ ಪುನರ್ ವಿಮರ್ಶೆ ಹಾಗೂ ಪುನರ್ ನಿರ್ಧಾರ ಮಾಡಬೇಕು ಎಂಬುದು ನನ್ನ ಮನವಿ. ಕ್ಷೇತ್ರದ ಮತದಾರರು ಒಪ್ಪಿದರೆ ನನ್ನ ಅಭ್ಯಂತರ ಇಲ್ಲ. ಚಿಂತನಾ ಸಭೆಯಲ್ಲಿ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಈಗ ಟಿಕೆಟ್ ಘೋಷಣೆ ಮಾಡಿರುವುದನ್ನ ಪರಿಶೀಲನೆ ಮಾಡಬೇಕು ಎಂದು ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News