×
Ad

ದೇವದುರ್ಗ | ಸ್ಥಳೀಯ ಶಾಸಕರೊಂದಿಗೆ ಭಿನ್ನಮತ ಇರುವುದು ನಿಜ; ವರಿಷ್ಠರ ಸೂಚನೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ : ಬುಡ್ಡನಗೌಡ ಪಾಟೀಲ್

Update: 2025-06-25 21:15 IST

ದೇವದುರ್ಗ: ತಾಲೂಕಿನಲ್ಲಿ ಜೂ.7ರಂದು ದೇವದುರ್ಗದಲ್ಲಿ ನಡೆಯುವ ಜೆಡಿಎಸ್ ವರಿಷ್ಠರು ಹಾಗೂ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೆಗೌಡ ಅವರು ಮೂರ್ತಿ ಅನಾವರಣ ಹಾಗೂ ಸಮಾವೇಶಕ್ಕೆ‌ ನಾಯಕರಿಗೆ ಗೌರವಿಸಲು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ ಜಾಗಟಗಲ್ ತಿಳಿಸಿದರು.

ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ,ದೇವದುರ್ಗ ತಾಲೂಕಿನಲ್ಲಿ ಚುನಾವಣೆಗೂ ಮುನ್ನ ನೀಡಿದ ಯಾವುದೇ ಮಾತುಗಳು ಈಡೆರಿಲ್ಲ ಎಂಬ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ. ನನನ್ನು ಚುನಾವಣೆಯ ಸಂದರ್ಭದಲ್ಲಿ ಬಳಕೆಯ ಸರಕಾಗಿಸಿಕೊಂಡು ನನ್ನನ್ನು ಅವಮಾನಿಸಿ ಕಡೆಗಣಿಸಲಾಗಿದೆ ಎಂಬ ಮಾತು ಸತ್ಯ.

 ಮಾಜಿ ಪ್ರಧಾನಿಗಳಾದ ದೇವೇಗೌಡರು ನಮ್ಮ ತಾಲೂಕಿಗೆ ಆಗಮಿಸಲಿದ್ದಾರೆ. ನಮ್ಮ ನಡುವೆ ಭಿನ್ನಮತವಿದ್ದರೂ, ನಮ್ಮ ಪಕ್ಷದ ನಾಯಕರಾದ ಕುಮಾರಣ್ಣನವರ ಆಗ್ರಹವಿರುವ ಕಾರಣ ನಾವು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆಗೆ ಗೌರವಿಸಿ ಅಂದಿನ ಕಾರ್ಯಕ್ರಮದಲ್ಲಿ ನಾನು ನನ್ನ ಅಭಿಮಾನಿಗಳು ಭಾಗವಹಿಸಲಿದ್ದೇವೆಂದು ಪತ್ರಿಕಾಗೋಷ್ಠಿಯ ಮೂಲಕ ಹೇಳಿದರು.

ಈ ಸಂದರ್ಭದಲ್ಲಿ ಅಖಂಡ ತಾಲೂಕು ಹೋರಾಟಗಾರ ಶಿವರಾಜ ಕೊತ್ತದೊಡ್ಡಿ, ರಮೇಶ್ ಹುನಗುಂಡಬಾಡ, ಸಂಗನಗೌಡ ಕೋಣಚಪ್ಪಳಿ ಇತರರು ಉಪಸ್ಥಿರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News