ದೇವದುರ್ಗ | ಬೇಡಿಕೆಗಳನ್ನು ಈಡೇರಿಸದಿದ್ದರೆ ಶಾಸಕರ ಮನೆಯ ಮುಂದೆ ಉಗ್ರ ಹೋರಾಟ: ನಾಗರಿಕ ಹೋರಾಟ ಸಮಿತಿ
ದೇವದುರ್ಗ: ಸಾಮಾಜಿಕ ನ್ಯಾಯ ಜನರಿಗೆ ಸಿಗದ ಅನ್ಯಾಯವಾದಲ್ಲಿ ಹೋರಾಟಗಾರರು ಪ್ರಧಾನ ಮಂತ್ರಿಯನ್ನು ಪ್ರಶ್ನೆ ಮಾಡಿದ್ದಾರೆ ಶಾಸಕರನ್ನು ಸಹ ಪ್ರಶ್ನೆ ಮಾಡಿದ್ದಾರೆ. ಆಡಳಿತಾತ್ಮಕವಾಗಿ ಪ್ರಶ್ನಿಸುವವರನ್ನು ಗೌರವದಿಂದ ಕಾಣದೇ ಅವರಿಗೆ ಬೆದರಿಕೆ, ತೆಜೋವಧೆಗಳಂತಹ ಕೆಲಸಗಳು ಶಾಸಕರ ಬೆಂಬಲಿಗರಿಂದ ಮಾಡ್ತಾ ಇರೋದು ಹೋರಾಟಗಾರರಿಗೆ ಮಾಡುತ್ತಿರುವ ದೊಡ್ಡ ಅವಮಾನವಾಗಿದೆ ಎಂದು ವೆಂಕನಗೌಡ ವಕೀಲರು ಆರೋಪಿಸಿದರು.
ಪಟ್ಟಣದಲ್ಲಿ ನಾಗರಿಕ ಹೋರಾಟ ತಾಲೂಕು ಸಮಿತಿ ಹಮ್ಮಿಕೊಂಡಿದ್ದ ಹೋರಾಟವನ್ನು ಉದ್ದೇಶಿಸಿ ಮಾತಾನಾಡಿದ ಅವರು, ನಾಗರೀಕ ಹೋರಾಟ ಸಮಿತಿಯು ತಾಲೂಕಿನ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಬಾಬಾ ಸಾಹೇಬರು ನೀಡಿದ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿದ ಶಾಸಕರಾದ ಕರೆಮ್ಮ ಜಿ ನಾಯಕ್ ಅವರಿ ಬಾಬಾ ಸಾಹೇಬರು ಮೂರ್ತಿ ಕಾಣುತ್ತಿಲ್ಲವೇ? ಶಾಸಕರಾದ ತಕ್ಷಣದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆಂದು ಹೇಳಿ ಇಂದಿಗೂ ಪೂರ್ಣಗೊಳಿಸದೆ ನಿರಂತರ ಅವಮಾನವನ್ನು ಬಾಬಾ ಸಾಹೇಬರಿ ಶಾಸಕರಿಂದಲೇ ಮಾಡುತ್ತಿರೋದು ದೊಡ್ಡ ದುರಂತ. ಇಲ್ಲಿನ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದ್ದರು ಅವುಗಾಲನ್ನು ಬಗೆಹರಿಸಬೇಕಾದ ಶಾಸಕರು ಮಗನ ರಕ್ಷಣೆಗೆ ನಿಂತಿದ್ದಾರೆ. ಮಗನ ರಕ್ಷಣೆಗಾಗಿ ಪಕ್ಷದ ವರಿಷ್ಠರನ್ನು ಬೇಡಿ ಮಾಡಿ, ಜನ ಗೂಳೆ ಹೋಗುತ್ತಿದ್ದಾರೆ, ಕೈಗಾರಿಕೆಗಾಗಿ ಪಕ್ಷದ ವರಿಷ್ಠರನ್ನು ಬೇಟಿ ಮಾಡಲಾಗಿದೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಕಾನೂನಿಗರ ನೀವು ನಿಜವಾಗಿಯೂ ಗೌರವ ಕೋಡುವವರಾದರೆ ನ್ಯಾಯದೀಶರ ಆದೇಶಕ್ಕೆ ತಲೆ ಬಾಗಿ ತಮ್ಮ ಮಗನನ್ನು ಪೋಲಿಸರಿಗೆ ಒಪ್ಪಿಸಿ.
ಸದನದಲ್ಲಿ ಶಾಸಕರು ಕೇಳಬೇಕಾದ ಪ್ರಶ್ನೆಗಳು ಸಾಕಷ್ಟಿದ್ದರು ಅವರಿಗೆ ಪ್ರಶ್ನೆ ಮಾಡುವ ಸಂಘ ಸಂಸ್ಥೆಯವರನ್ನು ಮಟ್ಟ ಹಾಕುವ ಪ್ರಶ್ನೆಗಳನ್ನು ಸದನದಲ್ಲಿ ಕೇಳಿ ನಮ್ಮ ತಾಲೂಕಿನ ಗೌರವ ಹಾಳು ಮಾಡುತ್ತಿದ್ದಾರೆ. ಸಂಘಟನೆಯವರು ಹಿಂದೆನೂ ಹೋರಾಟ ಮಾಡಿದ್ದಾರೆ, ಇಗಲೂ ಮಾಡುತ್ತಿದ್ದೇವೆ, ಮುಂದೇಯೂ ಹೋರಾಟ ಮಾಡುತ್ತೇವೆ. ನೀವು ಎಷ್ಟೇ ಬೆದರಿಸಿದರು ಸಹ ಹೋರಾಟಗಾರು ಹೇದರುವ ಪ್ರಶ್ನೆಯೇ ಇಲ್ಲ. ಶಾಸಕರ ಬೆಂಬಲಿಗರಿಂದ, ಅವರ ಮಕ್ಕಳಿಂದ ಬೆದರಿಕೆ ಹಾಕುತ್ತಿದ್ದಾರೆಂದು ಸಾಕ್ಷಿ ಸಮೇತ ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿದರು ಪ್ರಕರಣ ದಾಖಲು ಯಾಕೆ ಮಾಡಿಕೊಳ್ಳುತ್ತಿಲ್ಲ? ಇದೇ ಶಾಸಕರ ಮಕ್ಕಳಿಗೆ ಸಾಮಾನ್ಯರು ಬೆದರಿಕೆ ಹಾಕಿದರೆ ಪೋಲಿಸ್ ಇಲಾಖೆ ಸುಮ್ಮನೆ ಬಿಡ್ತಿರ? ಕೂಡಲೇ ಒದ್ದು ಒಳಗಡೆ ಹಾಕ್ತಿರ. ಶಾಸಕರ ಮಕ್ಕಳಿಗೂ ಒಂದು ಕಾನೂನು, ಸಾಮಾನ್ಯರಿಗೆ ಒಂದು ಕಾನೂನು ನಮ್ಮ ತಾಲೂಕಿನಲ್ಲಿ ಇದಿಯ ಎಂಬ ಪ್ರಶ್ನೆ ಕಾಡುತ್ತಿದೆ.
ನಾವು ಇಂದು ಹೋರಾಟದ ಮೂಲಕ ನೀಡುತ್ತಿರುವ ಬೇಡಿಕೆಗಳ ಪಟ್ಟಿಯನ್ನು 15 ದಿನದೊಳಗಡೆ ಈಡೆರಿಸಬೇಕು. ಅದಕ್ಕೂ ಮೊದಲು ತಾಲೂಕು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಬೇಕು. ಇಲ್ಲವಾದಲ್ಲಿ ಹಳ್ಳಿ ಹಳ್ಳಿಗೆ ಜನರ ಮುಂದೆ ಹೋಗಿ ಶಾಸಕರ, ಅಧಿಕಾರಿಗಳ ದುರಾಡಳಿದ ವಿರುದ್ಧ ರಾಜ್ಯವೇ ತಿರುಗಿ ನೋಡುವಂತೆ ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಮಾನಪ್ಪ ಮೇಸ್ತ್ರಿ, ಹನುಮಂತಪ್ಪ ಮನ್ನಾಪುರಿ, ಹನುಮಂತಪ್ಪ ಕಾಕರಗಲ್, ಶಿವರಾಜ್ ರುದ್ರಾಕ್ಷಿ, ಮೋಹನ್ ಬಲ್ಲಿದವ್, ಕರಿಯಪ್ಪ ಮಾರಕಲ್, ಬಸವರಾಜ ಜಯಮ್, ಡೇವಿಡ್, ಲಕ್ಷ್ಮಣ ಮಸರಕಲ್, ಯಲ್ಲಪ್ಪ ಆಲ್ದರ್ತಿ, ಮಲ್ಲಪ್ಪ ಗೌಡೂರು ಇತರರು ಉಪಸ್ಥಿತರಿದ್ದರು.