ಹರವಿ, ಸಿರವಾರ ವಲಯ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ
ಸಿರವಾರ : ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಒಟ್ಟಿಗೆ ಸೇರಿಸಿ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದಾಗ ಮಕ್ಕಳು ಕಲಿಕೆಯತ್ತ ಆಸಕ್ತಿ ತೋರುತ್ತಾರೆ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.
ತಾಲೂಕಿನ ಸಣ್ಣ ಹೋಸೂರು ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ರಾಯಚೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಮಾನ್ವಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ, ಹರವಿ ಮತ್ತು ಸಿರವಾರ ವಲಯ ಮಟ್ಟದ FLN ಆಧಾರಿತ ಕಲಿಕಾ ಹಬ್ಬದ ಭಾಗವಹಿಸಿ ಮಾತನಾಡಿ, ಕಲಿಕಾ ಹಬ್ಬ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದೆ. ಕಲಿಕೆಯನ್ನು ಲಪ್ರದಗೊಳಿಸಲು ಶಿಕ್ಷಣ ಇಲಾಖೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.
ಕಲಿಕಾ ಹಬ್ಬದ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳುತ್ತದೆ. ಪ್ರತಿಭಾ ಕಾರಂಜಿ ಒಂದು ರೀತಿಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾದರೆ, ಕಲಿಕಾ ಹಬ್ಬ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಡುವ ಪಾಠಕ್ಕಿಂತ ಇಂತಹ ಪ್ರಾಯೋಗಿಕ ಪಾಠಗಳೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಮನಿ, ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜ ಗೌಡ ಆತ್ತನೂರು, ನಿವೃತ್ತ ಆಹಾರ ಅಧಿಕಾರಿ ಶಿವಪ್ಪ ಗೌಡ, ಭೂ ಧಾನಿ ಬಾಲಪ್ಪ, ಮಾಡಗಿರಿ ಗ್ರಾ.ಪಂ ಅಧ್ಯಕ್ಷ ಜಯವಂತ ಮಾಡಗಿರಿ, ಉಪಾಧ್ಯಕ್ಷ ಲಿಂಗನಗೌಡ, ಊರಿನ ಮುಖಂಡರುಗಳಾದ ಬಸವರಾಜಪ್ಪ ಗೌಡ, ತಿಮ್ಮಪ್ಪ, ವಿಠೋಬ, ಸಿಆರ್ಪಿ ದಿವಾಕರ್ ಪಿ ಮುಖ್ಯಗುರು ನಾಗಪ್ಪ ವಲೀಕಾರ್, ಗ್ರಾ ಪಂ ಸದಸ್ಯರು, ಎಸ್ ಡಿ ಎಮ್ ಸಿ ಸದಸ್ಯರು ಹಾಗೂ ಊರಿನ ಮುಖಂಡರಿದ್ದರು.