×
Ad

ಹಟ್ಟಿ ಪಟ್ಟಣ ಪಂಚಾಯತ್‌ ಉಪ ಚುನಾವಣೆ: ಲೆಕ್ಕಪತ್ರ ಸಲ್ಲಿಸದ ನಾಲ್ಕು ಜನ ಅಭ್ಯರ್ಥಿಗಳನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗ

Update: 2025-08-25 19:15 IST

ರಾಯಚೂರು : ಹಟ್ಟಿ ಪಟ್ಟಣ ಪಂಚಾಯತ್‌ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾವಣಾ ಆಯೋಗಕ್ಕೆ ಲೆಕ್ಕ ಪತ್ರ ಸಲ್ಲಿಸದ ನಾಲ್ಕು ಜನರ ಅಭ್ಯರ್ಥಿಗಳನ್ನು ಮೂರು ವರ್ಷಗಳ ಅನರ್ಹಗೊಳಿಸಿ ಚುನಾವಣಾ ಆಯೋಗ ಆದೇಶಿಸಿದೆ.

2024 ನ.23 ರಂದು ನಡೆದ ಹಟ್ಟಿ ಪಟ್ಟಣ ಪಂಚಾಯತ್‌ ಉಪ ಚುನಾವಣೆಯಲ್ಲಿ ವಾರ್ಡ್‌ 6 ರಿಂದ ಸ್ಪರ್ಧಿಸಿದ್ದ ಚನ್ನಬಸವ ಅಂಬೇಡ್ಕರ ನಗರ, ಅಮರೇಶ ವಿಭೂತಿ ಮಠ ಹಾಗೂ ವಾರ್ಡ್‌ 8 ರಿಂದ ಸ್ಪರ್ಧಿಸಿದ್ದ ಅಂಬಮ್ಮ ಶ್ರೀನಿವಾಸ, ಮಧುಶ್ರೀ ಎಂಬ ಅಭ್ಯರ್ಥಿಗಳು ಚುನಾವಣಾ ವೆಚ್ಚ ಲೆಕ್ಕ ಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರಲಿಲ್ಲ. ಈ ಕುರಿತು ಚುನಾವಣಾ ಆಯೋಗ ನೋಟಿಸ್ ನೀಡಿದ್ದರೂ ಲೆಕ್ಕಪತ್ರ ಸಲ್ಲಿಸದೇ ಇರುವುದಿರಂದ ಆಯೋಗ ನಿಗಮಗಳನ್ವಯ ಮೂರು ವರ್ಷಗಳ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಿ ಚುನಾವಣಾ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ , ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೂ ಚುನಾವಣಾ ವೆಚ್ಚದ ಲೆಕ್ಕಪತ್ರದೊಂದಿಗೆ ಆಸ್ತಿ ಘೋಷಣೆಯೂ ಕಡ್ಡಾಯಗೊಳಿಸಲಾಗಿದೆ. ಸಕಾಲದಲ್ಲಿ ಸಲ್ಲಿಸದೇ ಇರುರುವರ ವಿರುದ್ದ ಕ್ರಮಕ್ಕೆ ಆಯೋಗ ಮುಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News