ಸಿರವಾರ | ಖಬರ್ ಸ್ಥಾನದ ಒತ್ತುವರಿ ಕ್ರಮಕ್ಕೆ ಮಾನವ ಹಕ್ಕುಗಳ ಪರಿಷತ್ ಅಗ್ರಹ
ಸಿರವಾರ : ಸಿರವಾರ : ಪಟ್ಟಣ ಪಂಚಾಯತ್ ವತಿಯಿಂದ ಸಿರವಾರ ಪಟ್ಟಣದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಬಸ್ ನಿಲ್ದಾಣದ ಹತ್ತಿರ ಫುಟ್‌ಪಾತ್ ಮೇಲೆ ಇದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ನಂತರ ಆ ಅಂಗಡಿಗಳನ್ನು ಬಸ್ ನಿಲ್ದಾಣದ ಬಳಿ ಇರುವ ಖಬರ್ ಸ್ಥಾನ (ಕಬರಸ್ತಾನ) ಪ್ರದೇಶದಲ್ಲಿ ಇಡುವುದು ಕಂಡು ಬಂದಿದೆ.
ಆ ಸ್ಥಳವು ವಕ್ಫ್ ಆಸ್ತಿ ಆಗಿದ್ದು, ಅಂಗಡಿಗಳನ್ನು ಅಲ್ಲಿ ಹಾಕಬೇಡಿ ಎಂದು ಅಧಿಕಾರಿಗಳು ತಿಳಿಸಿದರೂ, ಅಂಗಡಿ ಮಾಲಕರು ಕೆಲವು ರಾಜಕಾರಣಿಗಳ ಹೆಸರನ್ನು ಹೇಳಿಕೊಂಡು ಅಂಗಡಿಗಳನ್ನು ಇಡುವುದನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದು ರಾಜಕಾರಣಿಗಳ ಸ್ವಂತ ಜಾಗವಲ್ಲ ಎಂದು ತಿಳಿಸಿದರೂ ಮಾತು ಕೇಳುತ್ತಿಲ್ಲ. ತಕ್ಷಣ ವಕ್ಫ್ ಬೋರ್ಡ್ ಅಧಿಕಾರಿಗಳ ಜೊತೆಗೂಡಿ ಜಾಗ ಪರಿಶೀಲಿಸಿ, ಆಕ್ರಮಣ ತಡೆಯಬೇಕು ಎಂದು ಸಮಸ್ತ ಮುಸ್ಲಿಂ ಬಾಂಧವರ ಪರವಾಗಿ ಭಾರತೀಯ ಮಾನವ ಹಕ್ಕುಗಳ ಪರಿಷತ್ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ, ರಾಯಚೂರು ಹಾಗೂ ಸಿರವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ಮಾನವ ಹಕ್ಕು ತಾಲೂಕ ಅಧ್ಯಕ್ಷರಾದ ನಬಿ ರಸೂಲ್. ತಾಲೂಕು ಸಂಘಟನಾ ಕಾರ್ಯದರ್ಶಿ ಇಸ್ಮೈಲ್ ಫಾಜಿಲ್ ಬಡೇಘರ್, ಸಹಬಾಜ್, ಅತೀಕ್ ಬಡೆಘರ್, ರಾಜ್ ಮಹಮ್ಮದ್, ಮುಜ್ಜು, ಯಾಜಾಜ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.