ರಾಯಚೂರು | ಪಡಿತರ ಅಕ್ಕಿ ಅಕ್ರಮ ಸಾಗಣೆ: ಮೂವರ ಬಂಧನ
Update: 2025-06-18 17:42 IST
ರಾಯಚೂರು: ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ನೀಡಿದ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುವಾಗ ನೇತಾಜಿನಗರ ಠಾಣೆಯ ಪೊಲೀಸರು ನಗರದ ಎನ್ ಜಿಒ ಕಾಲೊನಿಯ ಜಮುಲಮ್ಮ ದೇವಸ್ಥಾನದ ಬಳಿ ದಾಳಿ ಮಾಡಿ ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ರಾಜೇಶ, ರಮೇಶ, ಶಿವರಾಜ ಬೊಲೆರೋ ಪಿಕಪ್ ವಾಹನದಲ್ಲಿ 32 ಕೆ.ಜಿ ತೂಕದ 41 ಪ್ಲಾಸ್ಟಿಕ್ ಚೀಲಗಳನ್ನು ಪಡಿತರ ಅಕ್ಕಿಯನ್ನು ಸಾಗಿಸುವಾಗ ಪೊಲೀಸರು ದಾಳಿ ಮಾಡಿ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರೀಕ್ಷಕರಾದ ಶಿವಮೂರ್ತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.