ಲಿಂಗಸೂಗೂರು | ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಶಾಸಕ ಮಾನಪ್ಪ ವಜ್ಜಲ್‌ರಿಂದ ಭೂಮಿ ಪೂಜೆ
ಲಿಂಗಸೂಗೂರು : ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ 18ನೇ ವಾರ್ಡ್ ನಲ್ಲಿ ಬರುವ ಹುಲಿಗುಡ್ಡ ಗ್ರಾಮದಲ್ಲಿ ನಡೆದ ಕೆಕೆಆರ್‌ಡಿಬಿ ಯೊಜನೆಯಲ್ಲಿ ಮಂಜೂರಾದ 5 ಕೋಟಿ ರೂ. ಅನುದಾನದಲ್ಲಿ ಮಂಜೂರಾದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಾಮಗಾರಿಗೆ ಶಾಸಕ ಮಾನಪ್ಪ ವಜ್ಜಲ್ ಭೂಮಿ ಪೂಜೆ ನೆರವೇರಿಸಿದರು.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ವಸತಿ ನಿಲಯಗಳುಬೇಕು. ಆದರೆ, ರಾಜ್ಯ ಸರ್ಕಾರ ಲಿಂಗಸೂಗೂರು ಕ್ಷೇತ್ರಕ್ಕೆ ಅನುದಾನ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮೀಸಲು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಆಗಬೇಕಾದರೆ ಮೊದಲು ಸರಕಾರ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ನಂಜುಂಡಪ್ಪ ವರದಿ ಆಧರಿಸಿ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ತಾಲೂಕಿಗೆ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದರು.
ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಭೂಪನಗೌಡ ಪಾಟೀಲ ಕರಡಕಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೇಟಿ, ಟಿಎಪಿಎಂಸಿ ಅಧ್ಯಕ್ಷ ಶಶೀಧರ ಆಶಿಹಾಳ, ತಹಶೀಲ್ದಾರ್ ಸತ್ಯೆಮ್ಮ, ಜಿಲ್ಲಾ ಬಿಸಿಎಂ ಅಧಿಕಾರಿ ಸುನೀತಾ ಕಾಂಬಳೆ, ತಾಲೂಕು ಬಿಸಿಎಂ ಅಧಿಕಾರಿ ಮಾನಪ್ಪ ಬಡಿಗೇರ, ಪುರಸಭೆ ಸದಸ್ಯರಾದ ಪರುಶುರಾಮ ಕೆಂಭಾವಿ, ಮುದುಕಪ್ಪ ನಾಯಕ, ವೆಂಕನಗೌಡ ಪಾಟೀಲ ಐದನಾಳ ಸೇರಿದಂತೆ ಹಲವು ಗಣ್ಯರು ಇದ್ದರು.