ರಾಯಚೂರು: ಸ್ನಾನ ಮಾಡಲು ಹೊಂಡಕ್ಕೆ ಇಳಿದ ವ್ಯಕ್ತಿ ನಾಪತ್ತೆ
Update: 2025-03-14 22:33 IST
ಸಾಂದರ್ಭಿಕ ಚಿತ್ರ
ರಾಯಚೂರು: ಸ್ನಾನ ಮಾಡಲು ಹೊಂಡಕ್ಕೆ ಇಳಿದ ವ್ಯಕ್ತಿ ಹೊರಗೆ ಬಾರದೆ ನಾಪತ್ತೆಯಾದ ಘಟನೆ ಇಂದು ಮಧ್ಯಾಹ್ನ ರಾಯಚೂರು ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಸಮೀಪದ ಜಾಗೀರವೆಂಕಟಪೂರು ಗ್ರಾಮದ ಸೋಮನಗೌಡ (45) ನಾಪತ್ತೆಯಾದ ವ್ಯಕ್ತಿ.
ರಸ್ತೆ ಕಾಮಗಾರಿಗಾಗಿ ಮಣ್ಣು ತೆಗೆದಿದ್ದರಿಂದ ನಿರ್ಮಾಣವಾದ ಗುಂಡಿಯಲ್ಲಿ ಸ್ನಾನ ಮಾಡಲು ಇಳಿದಿದ್ದರು ಎನ್ನಲಾಗಿದೆ. ಅವರು ಹೊಂಡದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.