ಪರಿಸರ ಸ್ನೇಹಿ ಮಣ್ಣಿನ ಗಣಪತಿ ತಯಾರಿಸುವ ಸ್ಪರ್ಧೆಗೆ ಸಚಿವ ಎನ್.ಎಸ್.ಬೋಸರಾಜು ಚಾಲನೆ
Update: 2025-08-24 17:15 IST
ರಾಯಚೂರು: ಮಹಾನಗರ ಪಾಲಿಕೆ ಹಾಗೂ ಗ್ರೀನ್ ರಾಯಚೂರು ಸಹಯೋಗದಲ್ಲಿ ಇಂದು ಪರಿಸರ ಸ್ನೇಹಿ ಮಣ್ಣಿನ ಗಣಪತಿ ತಯಾರಿಸುವ ಸ್ಪರ್ಧೆಗೆ ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡಿದರು.
ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿಲಾಗಿದ್ದ ಸಸಿಗಳ ಬೀಜ ಹಾಗೂ ಮಣ್ಣಿನಿಂದ ತಯಾರಿಸಿದ ಗಣಪತಿ ಯಲ್ಲಿ ಎಲ್ಲಾ ಮಕ್ಕಳು ಭಾಗವಹಿಸಿದ್ದರು.
ಸ್ಪರ್ಧೆಯ ನಂತರ ವಿಜೇತರಿಗೆ ಬಹುಮಾನ ಹಾಗೂ ಇ ಸರ್ಟಿಫಿಕೇಟ್ ನೀಡಲಾಗುವುದು. ಮಣ್ಣಿನಿಂದ ತಯಾರಿಸಿದ ಗಣಪತಿ ಮನೆಯಲ್ಲಿ ಪ್ರತಿಷ್ಠಾಪಿಸಿ ಬಳಿಕ ನೀರಿನಲ್ಲಿ ವಿಸರ್ಜನೆ ಮಾಡದೇ ಮನೆಯ ಬಳಿ ತಗ್ಗು ತೋಡಿ ಹಾಕಿದರೆ ಮಣ್ಣುಕರಗಿ ಬೀಜದಿಂದ ಸಸಿಯಾಗಿ ಮರವಾಗಿಸಲು ಪೋಷಿಸಬೇಕು. ಈ ನಿಟ್ಟಿನಲ್ಲಿ ಪ್ರತಿವರ್ಷ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂದು ಗ್ರೀನ್ ರಾಯಚೂರಿನ ಅಧ್ಯಕ್ಷ ರಾಜೇಂದ್ರ ಶಿವಾಳೆ ಹೇಳಿದರು.