×
Ad

ಶಾಸಕ ಹಂಪನಗೌಡ ಬಾದರ್ಲಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದಕ್ಕೆ 5 ಬಾರಿ ಗೆದ್ದಿದ್ದಾರೆ: ಸುಡಾ ಅಧ್ಯಕ್ಷ ಬಾಬುಗೌಡ

Update: 2025-11-05 16:55 IST

ಸಿಂಧನೂರು: ಶಾಸಕ ಹಂಪನಗೌಡ ಬಾದರ್ಲಿಯವರ ವ್ಯಕ್ತಿತ್ವ, ರೈತರ ಮೇಲಿನ ಕಾಳಜಿ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಇರುವ ನಿಲುವು ಕಾರಣದಿಂದಲೇ ಕ್ಷೇತ್ರದ ಜನರು ಅವರನ್ನು ಐದು ಬಾರಿ ವಿಧಾನಸೌಧಕ್ಕೆ ಕಳುಹಿಸಿದ್ದಾರೆ ಎಂದು ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ರೈತರ ವಿಚಾರದಲ್ಲಿ ಹಂಪನಗೌಡ ಬಾದರ್ಲಿಯವರು ತಾರತಮ್ಯ ಬಗೆದಿಲ್ಲ, ಬಗೆಯುವುದು ಇಲ್ಲ. ನಾಡಗೌಡರು ಸಚಿವರಾಗಿ ಹಾಗೂ ಐಸಿಸಿ ಸಲಹಾ ಸಮಿತಿ ಅಧ್ಯಕ್ಷರಾಗಿ ರೈತರಿಗೆ ಕೊಟ್ಟ ಕೊಡುಗೆ ಏನೆಂದರೆ ಬೆಳಗುರ್ಕಿ ಗ್ರಾಮದಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಬಳಸಬೇಕಾದ ಅನುದಾನ ದುರುಪಯೋಗ ಪಡಿಸಿಕೊಂಡು ತಮ್ಮ ಕಾರ್ಯಕರ್ತ ವೆಂಕಟೇಶ ನಂಜಲದಿನ್ನಿ ಅವರ ಹೊಲಕ್ಕೆ ಪೈಪ್ ಲೈನ್ ಮಾಡುವ ಮೂಲಕ ಎಸ್ಸಿ-ಎಸ್ಟಿ ಸಮುದಾಯಕ್ಕೆ ಮಾಡಿದ ಬಹುದೊಡ್ಡ ಮೋಸ ಅಲ್ಲದೆ ಇನ್ನೇನೂ. ಇದು ನಾಡಗೌಡರ ರೈತಪರ ಕಾಳಜಿಯೇ? ಎಂಬುವುದು ಆ ಭಾಗದ ರೈತರು ಯೋಚಿಸಬೇಕು.

ತಾಲೂಕಿನ ಅಭಿವೃದ್ಧಿ ಬಗ್ಗೆ ಪ್ರಶ್ನಿಸುವ ಮುಖಂಡರೇ 2013 ರಿಂದ 18ರ ಸಾಲಿನ ರೈತಪರ ಯೊಜನೆಗಳಾದ ಹುಡಾ ಏತ ನೀರಾವರಿ ಯೊಜನೆ, ಸಿರನಗುಂಡಿ ಪಿಕಪ್ 2,848 ಎಕರೆ, ಗೊರೇಬಾಳ ಪಿಕಪ್ 4,438 ಎಕರೆ, ಉದ್ಬಾಳ ಗೊಮರ್ಸಿ ಸಣ್ಣ ನೀರಾವರಿ ಯೊಜನೆ 630 ಎಕರೆ, ಒಳಬಳ್ಳಾರಿ ಚನ್ನಬಸವೇಶ್ವರ ಏತ ನೀರಾವರಿ ಯೊಜನೆ 6,015, ತಿಮ್ಮಾಪುರ ಏತ ನೀರಾವರಿ ಯೊಜನೆ 36,000 ಎಕರೆ ಜಮೀನುಗಳಿಗೆ ನೀರು ಕೊಡಿಸಿದ್ದಾರೆ.

ಈ ಅವಧಿಯಲ್ಲಿ ಸಾಲಗುಂದ ಏತ ನೀರಾವರಿ ಯೊಜನೆ 19,335 ಎಕರೆ, ಸಿದ್ದಲಿಂಗೇಶ್ವರ ಏತ ನೀರಾವರಿ ಯೊಜನೆ 16,344 ಎಕರೆ, ಚನ್ನಳ್ಳಿ, ಸಿದ್ರಾಂಪುರ, ಏತ ನೀರಾವರಿ ಯೊಜನೆ 9,147 ಎಕರೆ, ತಿಮ್ಮಾಪುರ ಹಾಗೂ ಒಳಬಳ್ಳಾರಿ ಏತ ನೀರಾವರಿ ಯೋಜನೆ ನಡುವಿನ ತಡೆಗೋಡೆ ನಿರ್ಮಾಣಕ್ಕೆ 43 ಕೋಟಿ ರೂ. ವೆಚ್ಚದ ಅನುದಾನ ತಂದಿದ್ದಾರೆ. ಈ ಎಲ್ಲಾ ರೈತಪರ ಯೊಜನೆಗಳು ಬಡವರ ಪರವಾಗಿಯೋ ? ಅಥವಾ ಶ್ರೀಮಂತರ ಪರವಾಗಿಯೋ ? ಎಂಬುವುದು ರೈತರೇ ಯೋಚನೆ ಮಾಡಬೇಕೆಂದಿದ್ದಾರೆ.

ತಿಮ್ಮಾಪುರ ಏತ ನೀರಾವರಿ ಯೋಜನೆ ಅಡಿಯಲ್ಲಿ ಬಂದಂತಹ ಪೈಪ್ ಲೈನನ್ನು ತಮ್ಮ ಹೊಲದಲ್ಲಿ ದುರುಪಯೋಗ ಪಡಿಸಿಕೊಂಡು ಏರ್ ವಾಲ್ ಮುಖಾಂತರ ಅನಧಿಕೃತವಾಗಿ ತಮ್ಮ ಹೊಲಗಳಿಗೆ ನೀರು ಬಳಸಿಕೊಳ್ಳುವುದು ಸರಿನಾ? ಅಥವಾ ರೈತ ಪರವಾಗಿನಾ? ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News