×
Ad

ರಾಯಚೂರು: ರಾಂಪೂರು ಬಡಾವಣೆಗೆ ಶೌಚಾಲಯ, ಮೂಲಸೌಕರ್ಯ ನೀಡಲು ಎಂಎಲ್ ಸಿ ವಸಂತ‌ಕುಮಾರ ಸೂಚನೆ

Update: 2025-07-16 18:40 IST

ರಾಯಚೂರು: ನಗರದ ವಾರ್ಡ್ ನಂಬರ್ 35ರ ರಾಂಪೂರು ಬಡಾವಣೆಗೆ ಮಹಿಳೆಯರ ಶೌಚಾಲಯ, ಅಗಸಿಕಟ್ಟೆ ಮರುನಿರ್ಮಾಣ, ಒಳಚರಂಡಿ ಕಾಮಗಾರಿ ನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎ. ವಸಂತ‌ಕುಮಾರ ಅವರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರಿಂದು ರಾಂಪುರ ಬಡಾವಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಡಾವಣೆಯ ಜನರು ಹಲವು ಜ್ವಲಂತ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರು.

ರಥೋತ್ಸವದ ಸಂದರ್ಭದಲ್ಲಿ ಆಗುತ್ತಿರುವ ಜಾಗದ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಿದರು.

ತಕ್ಷಣ ಮಹಾನಗರ ಪಾಲಿಕೆ‌ ಅಧಿಕಾರಿಗಳಿಗೆ ಸಂಪರ್ಕಿಸಿ‌ ಆದ್ಯತೆಯ ಮೇರೆಗೆ ಒಳಚರಂಡಿ ಮತ್ತು ಶೌಚಾಲಯ ನಿರ್ಮಾಣ ಮಾಡಲು ಸೂಚಿಸಿದರು. ಅಲ್ಲದೇ ತಮ್ಮ ಅನುದಾನ ದಲ್ಲಿ ಇನ್ನುಳಿದ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ‌ ಸಂದರ್ಭದಲ್ಲಿ ಕೆಪಿಸಿಸಿ‌ ವಕ್ತಾರರಾದ ಡಾ.ರಝಾಕ ಉಸ್ತಾದ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ‌ ವರ್ಗಗಳ ಜಿಲ್ಲಾ ಅಧ್ಯಕ್ಷ ಮುರಳಿ ಯಾದವ, ಮೊಹಮ್ಮದ‌ ಉಸ್ಮಾನ, ಇಕ್ಬಾಲ್ ಅಹ್ಮದ, ಶ್ರೀನಿವಾಸ ಶಿಂಧೆ, ಅಂಜಿನಕುಮಾರ,

ಗ್ರಾಮದ ಮುಖಂಡರಾದ ಮಹಾಂತೇಶ, ಸಿ

ಶಿವರಾಜ ಬೊಮ್ಮನಾಳ, ಶೇಖರಪ್ಪ ತಾತ, ವಿರುಪಾಕ್ಷಿ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ, ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News