ಜೋಳದ ಹೊಲದಲ್ಲಿ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟ
Update: 2025-02-05 15:24 IST
ರಾಯಚೂರು: ಸಿರವಾರ ತಾಲೂಕಿನ ಸಿಂಗಡದಿನ್ನಿ ಹೊರವಲಯದ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಜೋಳದ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಬೆಳೆ ಸಂಪೂರ್ಣವಾಗಿ ನಾಶವಾದ ಘಟನೆ ನಡೆದಿದೆ.
ಶರಣಪ್ಪ ಶಾಖಾಪುರ, ಮತ್ತು ಚನ್ನಪ್ಪ ಎಂಬುವವರಿಗೆ ಸೇರಿದ ಜಮೀನಿನ ಪಕ್ಕದ ಜಮೀನುಗಳಲ್ಲಿ ಕಟಾವಿನ ನಂತರ ಉಳಿದಿದ್ದ ಕಸವನ್ನು ತೆಗೆಯಲು ಬೆಂಕಿ ಹಚ್ಚಲಾಗಿತ್ತು, ಗಾಳಿಗೆ ಬೆಂಕಿಯ ಕಿಡಿ ಬೆಳೆಯಿದ್ದ ಜಮೀನಿನ ಬೆಳೆಗೆ ತಗುಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಐದು ಎಕರೆ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಜೋಳದ ಬೆಳೆ ನಾಶದಿಂದ ರೂ.2.85 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.
ಜೋಳದ ಬೆಳೆಗೆ ಬೆಂಕಿ ತಗುಲಿ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.