ರಾಯಚೂರು: ಹಳ್ಳದಲ್ಲಿ ಕೊಚ್ಚಿ ಹೋದ ಎತ್ತು, ಬಂಡಿ
Update: 2025-08-13 18:34 IST
ರಾಯಚೂರು: ಮಸ್ಕಿ ಜಲಾಶಯದಿಂದ ಮಂಗಳವಾರ ಬೆಳಿಗ್ಗೆ ನೀರು ಬಿಡುಗಡೆ ಮಾಡಿದ ಕಾರಣ ಹಿರೇಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಈ ವೇಳೆ ಎತ್ತಿನ ಬಂಡಿಯಲ್ಲಿ ಜಮೀನಿಗೆ ತೆರಳುತ್ತಿದ್ದ ರೈತ ಹನುಮಂತಪ್ಪ ಎತ್ತಿನ ಬಂಡಿ, ಟಗರುಗಳ ಸಹಿತ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಹಳ್ಳದಲ್ಲಿನ ಗಿಡಗಂಟಿ ಹಿಡಿದುಕೊಂಡಿದ್ದ ಅವರನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ. ಒಂದು ಎತ್ತು ಈಜಿ ದಡ ಸೇರಿದೆ. ಮತ್ತೊಂದು ಎತ್ತು, ಬಂಡಿ ಹಾಗೂ ನಾಲ್ಕು ಟಗರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಎತ್ತಿನ ಬಂಡಿ ಹಾಗೂ ಎತ್ತುವಿನ ಕಳೇಬರ ಪತ್ತೆಯಾಗಿದೆ.
ಹನುಮಂತಪ್ಪ ಬಡ ರೈತನಾಗಿದ್ದಾರೆ. ಸರ್ಕಾರ ಕೂಡಲೇ ಅವರ ನೆರವಿಗೆ ಬರಬೇಕು' ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.