ರಾಯಚೂರು ನಗರದಲ್ಲಿ ಜ.3ರಂದು ವಿದ್ಯುತ್ ವ್ಯತ್ಯಯ
Update: 2026-01-02 21:53 IST
ರಾಯಚೂರು : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾದ ಕಂಡಕ್ಟರಿಂಗ್ ದುರಸ್ತಿ ಕಾಮಗಾರಿ ನಿರ್ವಹಿಸುತ್ತಿರುವ ಪ್ರಯುಕ್ತ ಜ.3ರ ಬೆಳಿಗ್ಗೆ 10:30 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬನಶಂಕರಿ ರೊಟ್ಟಿ ಕೇಂದ್ರದಿಂದ ಮಾರೆಮ್ಮ ಗುಡಿ ರಾಂಪೂರು ರೋಡ್‌ವರೆಗೆ, ಮಾರೆಮ್ಮ ಗುಡಿ ರಾಂಪೂರು ರೋಡ್‌ರಿಂದ ವಿಜಿಲೆನ್ಸ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವ ದೀಪಕ್ ಮನೆವರೆಗೆ ಮತ್ತು ಬೆಲ್ಲಂ ಕಾಲೋನಿಯ ಸುಬ್ರಮಣ್ಯ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999, 9480845955 ಮತ್ತು 9448395624ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.