ಪುರಾತತ್ವ ಸಾರುವ ಕೋಟೆಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ಸಚಿವ ಎನ್.ಎಸ್.ಬೋಸರಾಜು
Update: 2025-07-07 18:48 IST
ರಾಯಚೂರು: ನಮ್ಮ ಪೂರ್ವಜರ ಐತಿಹಾಸಿಕ ಕುರುಹುಗಳಾದ ಕೋಟೆ, ಕಂದಕ ಸೇರಿದಂತೆ ಪುರಾತತ್ವ ಸಾರುವ ಶಿಲಾ ಶಾಸನಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಐತಿಹಾಸಿಕ ಪುರಾತನ ಸ್ಮಾರಕಗಳ ಸಂರಕ್ಷಣೆಗಾಗಿ ಕೋಟೆ ಪಕ್ಕದ ಕಂದಕ, ರಾಜಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಇಂದು ವೀಕ್ಷಣೆ ಮಾಡಿ ಮಾತನಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ., ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಮೇಯರ್ ನರಸಮ್ಮ ಮಾಡಗಿರಿ, ಕೆ ಶಾಂತಪ್ಪ, ಜಯಣ್ಣ, ಉಪ ಮಹಾಪೌರರಾದ ಸಾಜಿದ್ ಸಮೀರ್, ಮಹೇಶ, ನರಸಿಂಹಲು ಮಾಡಗಿರಿ, ಬಸವರಾಜ ಪಾಟೀಲ ಉಪಸ್ಥಿತರಿದ್ದರು.