×
Ad

ಲಿಂಗಸುಗೂರು | ವಸತಿ ನಿಲಯಕ್ಕೆ ಮೂಲಸೌಕರ್ಯಗಳಿಗೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2025-12-18 16:48 IST

ಲಿಂಗಸುಗೂರು : ತಾಲೂಕಿನ ಹಟ್ಟಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

‎ ‎ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ರಮೇಶ್ ವೀರಾಪೂರ್ ಮಾತನಾಡಿ, ಸಮಾಜ ಕಲ್ಯಾಣ ನಡೆಸಲಾಗುತ್ತಿರುವ ಬಹುತೇಕ ವಿದ್ಯಾರ್ಥಿ ನಿಲಯಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಮೇಲ್ವಿಚಾರಕರು ಮನಸ್ಸಿಗೆ ಬಂದಾಗ ವಸತಿ ನಿಲಯಕ್ಕೆ ಭೇಟಿ ನೀಡುತ್ತಾರೆ. ಸೌಲಭ್ಯ ಕೇಳಿದ ವಿದ್ಯಾರ್ಥಿಗಳಿಗೆ ದಮ್ಕಿ ಹಾಕುತ್ತಿದ್ದಾರೆ ಅಥವಾ ಸೌಲಭ್ಯ ಕೇಳುವ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ತಣ್ಣಗಾಗಿಸುವ ಪ್ರಯತ್ನ ಮಾಡಿ ಸೌಲಭ್ಯ ನೀಡದೇ ನುಣಿಚಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಈ ಕೂಡಲೇ ಈ ಬೇಜವಾಬ್ದಾರಿ ನಿಲಯ ಪಾಲಕರನ್ನು ಕೆಲಸದಿಂದ ವಜಾ ಮಾಡಬೇಕು. ಸಮಯಕ್ಕೆ ಸರಿಯಾಗಿ ಬಂದು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವಂತಹ ನಿಲಯ ಪಾಲಕರನ್ನು ನೇಮಿಸಬೇಕು ಹಾಗೂ ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು, ತಾಲೂಕಾಧ್ಯಕ್ಷ ಗೋವಿಂದ, ಜೆಎಂಎಸ್ ತಾಲೂಕಾಧ್ಯಕ್ಷೆ ವನಜಾಕ್ಷಿ, ತಾಲೂಕು ಉಪಾಧ್ಯಕ್ಷೆ ಸಾಹೀರಾ ಖಾನ್, ಡಿವೈಎಫ್ಐ ಜಿಲ್ಲಾ ಸಂಚಾಲಕ ಅಲ್ಲಾಭಕ್ಷ ಸಾಸಿಹಾಳ, ತಾಲೂಕು ಮುಖಂಡ ಶಂಶುದ್ದೀನ್ ಔಟಿ, ಕೆಪಿಆರ್ ಎಸ್ ಜಿಲ್ಲಾ ಉಪಾಧ್ಯಕ್ಷ ಪೆಂಚಲಯ್ಯ ಎಸ್ಎಫ್ಐ ಮುಖಂಡರಾದ ವೀರೇಶ, ದೇವರಾಜ್, ಸುನೀಲ್, ಜಮದಗ್ನಿ, ಮಹೇಶ್ ಸೇರಿ ವಿದ್ಯಾರ್ಥಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News