×
Ad

ಲಿಂಗಸುಗೂರು | ಡಿ.21ರಂದು ನದಾಫ್ ಸಮಾವೇಶ : ಮೌಲಾಸಾಬ ಗಣದಿ

Update: 2025-12-18 17:15 IST

ಲಿಂಗಸುಗೂರು: ಕಲಬುರಗಿ ವಿಭಾಗ ಮಟ್ಟದ ನದಾಫ್ / ಪಿಂಜಾರ ಸಂಘದ ಸಮಾವೇಶವನ್ನು ಡಿ.21ರಂದು ಹಟ್ಟಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮೌಲಾಸಾಬ ಗಣದಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1500 ನೇ ಜನ್ಮ ದಿನೋತ್ಸವ ನಿಮಿತ್ಯ ಹಮ್ಮಿಕೊಂಡಿರುವ ಸಮಾವೇಶದಲ್ಲಿ ನದಾಫ್ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಲ್ಯಾಣ ಕರ್ನಾಟಕ ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

ಹಟ್ಟಿ ಪಟ್ಟಣ ಸ್ವರ್ಣಭವನದಲ್ಲಿ ಸಮಾವೇಶ ಜರುಗಲಿದ್ದು, ಇದರಲ್ಲಿ ಸಚಿವರಾದ ಎನ್‌.ಎಸ್.ಬೋಸರಾಜು, ಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಮಾಜಿ ಶಾಸಕರು, ಸಂಸದರು, ಕೇಂದ್ರ ಸಚಿವರು ಸೇರಿ ಸಂಘದ ರಾಜ್ಯಾಧ್ಯಕ್ಷರು, ರಾಜ್ಯ ಸಮಿತಿ ಮುಖಂಡರು ಪಾಲ್ಗೊಳ್ಳಲಿದ್ದಾರೆ. ನದಾಫ್ / ಪಿಂಜಾರ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಲಬುರಗಿ ವಿಭಾಗದ ಉಪಾಧ್ಯಕ್ಷ ಮಹೆಬೂಬಸಾಬ ಸಂತೆಕೆಲ್ಲೂರು, ರಾಜ್ಯ ಸಮಿತಿ ಸದಸ್ಯರಾದ ಖಾದರಸಾಬ ಅಂಗಡಿ ಆನೆಹೊಸೂರು, ಮುಹಮ್ಮದ್‌ ಖಾಜಾಹುಸೇನ್, ಮೌನುದ್ದೀನ್ ಬೂದಿಹಾಳ, ಯಮನೂರ ನದಾಫ್‌, ತಾಲೂಕು ಅಧ್ಯಕ್ಷ ಟಿ.ಅಮೀನುದ್ದೀನ್ ಚಾಂತಾಪೂರ, ಉಪಾಧ್ಯಕ್ಷ ಬಿ.ಅಮೀನುದ್ದೀನ್ ಬಂಡಿ ( ಅಮ್ಮಿ ), ಹಟ್ಟಿ ಘಟಕದ ಉಪಾಧ್ಯಕ್ಷ ಖಾಚಾಹುಸೇನ್ ಬಂಗಾರಿ ಸೇರಿ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News