ರಾಯಚೂರು | ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು
ರಾಯಚೂರು : ನವೋದಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗ್ರೂಪ್-ಬಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳು ಹಲವು ರೀತಿಯ ತೊಂದರೆ ಒಳಗಾಗಿದ್ದಾರೆ.
ಫೇಸ್ ಸ್ಕ್ಯಾನಿಂಗ್ ಮಾಡದೇ ಪರೀಕ್ಷೆ ಬರೆಸಿದ್ದಾರೆ, ಪ್ರಶ್ನೆ ಪತ್ರಿಕೆಯನ್ನು ಐದು ನಿಮಿಷ ತಡವಾಗಿ ನೀಡಿದ್ದಾರೆ. ಫೇಸ್ ಸ್ಕ್ಯಾನಿಂಗ್ ಮಾಡುವ ನೆಪದಲ್ಲಿ ಎರಡು ಮೂರು ಬಾರಿ ಅಭ್ಯರ್ಥಿಗಳಿಗೆ ಮೂರು ಅಂತಸ್ತಿನಿಂದ ಮೇಲಿಂದ ಕೆಳಗೆ ಇಳಿಸಿ ಕಾಲ ಹರಣ ಮಾಡಿದ್ದಾರೆ. ಪರೀಕ್ಷೆ ಮುಗಿದ ನಂತರ ಫೇಸ್ ಸ್ಕ್ಯಾನ್ ಮಾಡದೇ ಟೆಕ್ನಿಕಲ್ ಸಮಸ್ಯೆಯಾಗಿದೆ ಎಂದು ಕಾರಣ ಹೇಳಿದ್ದಾರೆ.
ಇತ್ತ ಅಭ್ಯರ್ಥಿಗಳು ಗೊಂದಲದಲ್ಲಿದ್ದು, ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುತ್ತಾರೋ, ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ.
ಪರೀಕ್ಷೆ ಮುಗಿದ ನಂತರ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಅಭ್ಯರ್ಥಿಗಳು ಇಂಥಹ ಕಾಲೇಜನ್ನು ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು?. ಇದಕ್ಕೆ ಉತ್ತರಿಸಿದ ಪೊಲೀಸ್ ಸಿಬ್ಬಂದಿ ಪತ್ರಿಕೆಗಳು ಮೌಲ್ಯಮಾಪನ ಮಾಡುತ್ತಾರೆ ಯಾವುದೇ ತೊಂದರೆ ಇಲ್ಲ ಎಂದು ಸಬೂಬು ಹೇಳಿ ಕಳುಹಿಸಿದ್ದಾರೆ.