×
Ad

ರಾಯಚೂರು | ಮೆಟ್ರಿಕ್ ನಂತರದ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Update: 2025-11-05 15:57 IST

ರಾಯಚೂರು : ಯರಗೇರಾದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳನ್ನು 100ರ ಸಂಖ್ಯಾಬಲದೊಂದಿಗೆ ಪ್ರಾರಂಭಿಸಲಾಗಿದ್ದು, ಈ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಇಲ್ಲಿನ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2025-26ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.

ದಾಖಲಾತಿಗಳು :

ಹೊಸದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಖಾತೆಯನ್ನು ಸೃಜನೆ ಮಾಡಿಕೊಳ್ಳಬೇಕು. ಖಾತೆಯನ್ನು ಸೃಜನೆ ಮಾಡಿಕೊಳ್ಳುವಾಗ ವಿದ್ಯಾರ್ಥಿಯು ಆಧಾರ್ ಕಾರ್ಡನ್ನು ಬಳಸಿಕೊಂಡು ಖಾತೆಯನ್ನು ಸೃಜನೆ ಮಾಡಿಕೊಳ್ಳುವುದು (ವಿದ್ಯಾರ್ಥಿಯ ಬ್ಯಾಂಕ್‌ಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿರಬೇಕು). ಎಸ್.ಎಸ್.ಪಿ. ವಿದ್ಯಾರ್ಥಿಯ ಐ.ಡಿ ಸಂಖ್ಯೆ (ನವೀಕರಣ ವಿದ್ಯಾರ್ಥಿಗಳಿಗೆ). ವಿದ್ಯಾರ್ಥಿ/ಪಾಲಕರ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ವಿದ್ಯಾರ್ಥಿಯ ಸಂಪೂರ್ಣ ವಿಳಾಸ. ಆರ್.ಡಿ. ಸಂಖ್ಯೆ ಹೊಂದಿರುವ ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ(ಚಾಲ್ತಿ ಇರುವ) ಪ್ರತಿ. ಕಾಲೇಜಿನಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರ ಪ್ರತಿ. ಎಸೆಸೆಲ್ಸಿ ನೋಂದಣಿ ಸಂಖ್ಯೆ ಮತ್ತು ವಿಶ್ವವಿದ್ಯಾಲಯಗಳು ನೀಡುವ ನೋಂದಣಿ ಸಂಖ್ಯೆ. ಹಿಂದಿನ ಸಾಲಿನಲ್ಲಿ ತೇರ್ಗಡೆಯಾದ ಕೋರ್ಸುನ ಅಂಕಪಟ್ಟಿಯ ಪ್ರತಿಯೊಂದಿಗೆ ವಸತಿ ನಿಲಯಗಳಿಗೆ ಎಸ್.ಹೆಚ್.ಪಿ ತಂತ್ರಾಂಶ ವೆಬ್‌ಸೈಟ್ ವಿಳಾಸ: https://https://shp.karnataka.gov.in/ ನಲ್ಲಿ ನ.30ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಚೇರಿಯ ದೂರವಾಣಿ ಸಂಖ್ಯೆ: 080532-295603, 8762178819ಗೆ ಕಚೇರಿಯ ಸಮಯದಲ್ಲಿ ಸಂಪರ್ಕ ಮಾಡಬಹುದಾಗಿದೆ ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ರುಕ್ಮಣೀ ಬಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News