×
Ad

ರಾಯಚೂರು | ಐಇಸಿ ಚಟುವಟಿಕೆಗೆ ಅರ್ಜಿ ಆಹ್ವಾನ

Update: 2025-05-28 19:59 IST

ರಾಯಚೂರು : ಇಲ್ಲಿನ ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಸ್ವಚ್ಛ ಭಾರತ್ ಮಿಷನ್ 2.0ನಡಿ 3 ವರ್ಷಗಳ ಅವಧಿಗೆ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಡೇ-ನಲ್ಮ್ ಯೋಜನೆಯಡಿ ನೋಂದಾಯಿತ ಎಸ್‍ಹೆಚ್‍ಜಿ ಅರ್ಹ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಎಸ್‍ಹೆಚ್‍ಜಿ ಅರ್ಹ ಸದಸ್ಯರು ಸ್ವ-ಸಹಾಯ ಗುಂಪಿನ ಸದಸ್ಯರು ಆಗಿರಬೇಕು. (ಗುಂಪಿನ ಪಾಸ್‍ಬುಕ್,) ಆಧಾರ್‌ ಕಾರ್ಡ್, ಗುರುತಿನ ಚೀಟಿ, ರೇಷನ್ ಕಾರ್ಡ್, 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು. ಡೇ-ನಲ್ಮ್ ಎಂಐ.ಎಸ್ ಎಸ್‍ಹೆಚ್‍ಜಿ ನೋಂದಾಣಿಯಾದವರು ಅರ್ಜಿ ನಮೂನೆಯನ್ನು ಕಚೇರಿಯ ಆರೋಗ್ಯ ಶಾಖೆ ಅಥವಾ ಡೇ-ನಲ್ಮ್ ಶಾಖೆಯಿಂದ ಪಡೆದುಕೊಂಡು ಜೂನ್ 29ರಂದು ಸಂಜೆ 5 ಗಂಟೆಯೊಳಗಾಗಿ ಮಹಾನಗರ ಪಾಲಿಕೆ ಪ್ರಾದೇಶಿಕ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಎಂಜನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News