ರಾಯಚೂರು | ಮಾ.2 ರಂದು ವೇದಾಂತ ಶಿಕ್ಷಣ ಸಂಸ್ಥೆಯಿಂದ ಪ್ರತಿಭಾನ್ವೇಷಣೆ ಪರೀಕ್ಷೆ
ರಾಯಚೂರು : ಇಲ್ಲಿನ ವೇದಾಂತ ಶಿಕ್ಷಣ ಸಂಸ್ಥೆ, ವೇದಾಂತ ಪದವಿ ಮಹಾವಿದ್ಯಾಲಯ ಹಾಗೂ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಾ.2 ರಂದು 8 ನೇ ಜಿಲ್ಲಾ ಮಟ್ಟದ ಕಲಾಂ ಪ್ರತಿಭಾನ್ವೇಷಣೆ ಹಾಗೂ ವೇದಾಂತ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ಅಯೊಜಿಸಲಾಗಿದೆ ಎಂದು ವೇದಾಂತ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ರಾಕೇಶ ರಾಜಲಬಂಡಿ ತಿಳಿಸಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವೇದಾಂತ ಶಿಕ್ಷಣ ಸಂಸ್ಥೆ ಕಳೆದ ವರ್ಷದಿಂದ ಪಿಯುಸಿ ಕಲಾ ವಿಭಾಗದಲ್ಲಿ ಗ್ರಾಮೀಣ ಭಾಗದ 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಇದರ ಭಾಗವಾಗಿ ಗ್ರಾಮೀಣ ಭಾಗದ ಹಾಗೂ ಕನ್ನಡ ಮಾಧ್ಯಮದ ಎಸೆಸೆಲ್ಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲು ಪಠ್ಯಾಧಾರಿತ ವಿಷಯಗಳ 50 ಅಂಕಗಳ ಪರೀಕ್ಷೆ ಹಮ್ಮಿಕೊಂಡಿದ್ದೇವೆ. ಅದೇ ರೀತಿ ಯಾಪಲದಿನ್ನಿಯ ಕಲಾಂ ಸಂಸ್ಥೆ ಹಾಗೂ ವೇದಾಂತ ಶಿಕ್ಷಣ ಸಂಸ್ಥೆಯ ಸಂಯುಕ್ತಾ ಆಶ್ರಯದಲ್ಲಿ ಗ್ರಾಮೀಣ ಭಾಗದ 7-10 ನೇ ತರಗತಿ ವಿದ್ಯಾರ್ಥಿಗಳಿಗೆ ಕಲಾಂ ಪರೀಕ್ಷೆ ವೆದಾಂತ ಶಿಕ್ಷಣ ಸಂಸ್ಥೆಯಲ್ಲಿ ಬೆಳಿಗ್ಗೆ 12ಗಂಟೆಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನೊಂದಣಿಗಾಗಿ ಉಪನ್ಯಾಸಕರಾದ ಶಿವಪ್ಪ ಮೊ. 9743484664, ಭೀಮಣ್ಣ ಮೊ. 9740748169, ಕಲಾಂ ಸಾಮಾನ್ಯ ಜ್ಞಾನ ಪರೀಕ್ಷೆಗಾಗಿ ನರಸಿಂಹಲು 9742902031 ಸಂಪರ್ಕಿಸಲು ಮನವಿ ಮಾಡಿದ್ದಾರೆ.
ಶಾಸಕ ಬಸನಗೌಡ ದದ್ದಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯಸ್ಥೆ ಸ್ಮಿತಾ ಅಕ್ಕ ಸಾನಿಧ್ಯ ವಹಿಸಲಿದ್ದಾರೆ. ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾಂತವಗೇರ, ಮತ್ತಿತರರು ಮುಖ್ಯ ಅತಿಥಿಯಾಗಿ ಅಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಮಾರೋಪವನ್ನು ಶಾಸಕ ಡಾ.ಶಿವರಾಜ ಪಾಟೀಲ, ಓಂ ಸಾಯಿ ಧ್ಯಾನ ಮಂದಿರದ ಸಾಯಿ ಕಿರಣ ಅದೋನಿ ಸಾನಿಧ್ಯ ವಹಿಸಲಿದ್ದಾರೆ. ವಿಜೇತರಿಗೆ ಪ್ರಥಮ ಬಹುಮಾನ 20 ಸಾವಿರ ರೂ., ದ್ವಿತೀಯ ಬಹುಮಾನ 10 ಸಾವಿರ ರೂ. ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ನಡುವೆ ನೀಡಲಾಗುತ್ತದೆ ಎಂದರು.
ಈ ವೇಳೆ ಕಲಾಂ ಸಂಸ್ಥೆಯ ನರಸಿಂಹಲು, ವೇದಾಂತ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ನಿಖಿಲ್ ಉಪಸ್ಥಿತರಿದ್ದರು.