ರಾಯಚೂರು | ಜೆಸ್ಕಾಂ ಉಗ್ರಾಣದಲ್ಲಿ ಕಳ್ಳತನಕ್ಕೆ ಯತ್ನ: ಮಹಿಳೆಯ ಬಂಧನ
ಸಾಂದರ್ಭಿಕ ಚಿತ್ರ
ರಾಯಚೂರು : ಜೆಸ್ಕಾಂ ರಾಯಚೂರು ವಿಭಾಗದ ಉಗ್ರಾಣದಲ್ಲಿ ಬೆಳಗಿನ ಜಾವ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಮಹಿಳೆ ಒರ್ವರನ್ನು ಬಂಧಿಸಿರುವ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಐದು ಮಂದಿ ಮಹಿಳೆಯರು ಕಾಂಪೌಂಡ್ ಗೋಡೆ ಜಿಗಿದು ಉಪವಿಭಾಗದ ಉಗ್ರಾಣಕ್ಕೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಕಾವಲುಗಾರ ವೀರೇಶ್ ಅವರು ಮಹಿಳೆಯರನ್ನು ಹಿಡಿಯಲು ಪ್ರಯತ್ನಿಸಿದಾಗ, ನಾಲ್ವರು ಪರಾರಿಯಾಗಿದ್ದು, ಓರ್ವ ಮಹಿಳೆ ಮಾತ್ರ ಸಿಕ್ಕಿಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.
ಸಿಕ್ಕಿಬಿದ್ದ ಮಹಿಳೆಯನ್ನು ನಗರದ ಸದರ್ ಬಜಾರ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಜೆಸ್ಕಾಂ ಉಗ್ರಾಣದಲ್ಲಿ ಸಂಗ್ರಹವಾಗಿರುವ ವಿದ್ಯುತ್ ಉಪಕರಣಗಳನ್ನು ಕದಿಯಲು ಮಹಿಳೆಯರು ಬೆಳಗಿನ ಜಾವದಲ್ಲಿ ಪ್ರಯತ್ನಿಸುತ್ತಿರುವುದು ಕಂಡುಬಂದಿದ್ದು, ಈ ರೀತಿಯ ಘಟನೆಗಳು ಹಿಂದೆ ಹಲವು ಬಾರಿ ನಡೆದಿವೆ ಎಂದು ತಿಳಿದುಬಂದಿದೆ.
ಕಾವಲುಗಾರರ ಕೈಗೆ ಸಿಗದಂತೆ ಪರಾರಿಯಾಗಲು ಕೆಲವರು ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸುವುದು, ಅಶ್ಲೀಲ ವರ್ತನೆ ಮೂಲಕ ತಪ್ಪಿಸಿಕೊಳ್ಳುವ ಯತ್ನ ಮಾಡುವಂತಹ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ.