×
Ad

ರಾಯಚೂರು ಉತ್ಸವ| ಕೃತಕ ಅರಣ್ಯ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ಚಾಲನೆ

Update: 2026-02-01 19:56 IST

ರಾಯಚೂರು: ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಅರಣ್ಯ ಇಲಾಖೆಯು ಕೃತಕ ಅರಣ್ಯ ಪರಿಕಲ್ಪನೆ ಜನಾಕರ್ಷಣೀಯ ವಿನೂತನ ಯೋಜನೆ ರೂಪಿಸಿದೆ.

ಬಸವೇಶ್ವರ ವೃತ್ತದ ಹತ್ತಿರ ಇರುವ ವಾಲ್ಕಟ್ ಮೈದಾನದಲ್ಲಿ ಕೃತಕ ಅರಣ್ಯ ನಿರ್ಮಿಸಿದ್ದು ಜನರನ್ನು ಕೈ ಬೀಸಿ ಕರೆಯುತ್ತಿದೆ.

ಈ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ ಅವರು ಚಾಲನೆ ನೀಡಿದರು.

ಕಾಡಿನಲ್ಲಿನ ನೀರು ಜಾಡು, ತೊರೆ, ತಗ್ಗು, ಗಿಡ ಮರ, ಬಳ್ಳಿ, ಆನೆ, ನೀರುಗೋಳಿ, ಕೊಕ್ಕರೆ, ಬೆಳ್ಳಕ್ಕಿ ಸೇರಿದಂತೆ ಬಗೆಬಗೆಯ ಕಾಡು ಪ್ರಾಣಿಗಳ ಚಿತ್ರಗಳು ಇಲ್ಲಿ ಗಮನ ಸೆಳೆಯುತ್ತವೆ.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಅರಣ್ಯ ಇಲಾಖೆಯ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News