ರಾಯಚೂರು | ಮೊಸಳೆ ದಾಳಿ : ವ್ಯಕ್ತಿಗೆ ಗಾಯ
Update: 2025-01-31 20:54 IST
ರಾಯಚೂರು : ತಾಲೂಕಿನ ಸರ್ಜಾಪುರ ಕೆರೆಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವಾಗ ವ್ಯಕ್ತಿಯೊರ್ವನಿಗೆ ಮೊಸಳೆ ದಾಳಿ ನಡೆಸಿದ ಘಟನೆ ನಡೆದಿದೆ.
ಸರ್ಜಾಪುರ ಗ್ರಾಮದ ಮಹಾನಂದ ಗಾಯಗೊಂಡ ವ್ಯಕ್ತಿ ಎಂದು ಹೇಳಲಾಗಿದೆ.
ಬುಧವಾರ ಎತ್ತುಗಳಿಗೆ ಸ್ನಾನ ಮಾಡಿಸುವಾಗ ಮಹಾನಂದನ ಬಲಗಾಲಿಗೆ ಮೊಸಳೆ ದಾಳಿ ಮಾಡಿದ್ದು, ಅಲ್ಲಿಯೇ ಇದ್ದ ಸ್ಥಳೀಯರು ಮೊಸಳೆಗೆ ಕಟ್ಟಿಗೆಯಿಂದ ಹೊಡೆದು ಮಹಾನಂದನನ್ನು ರಕ್ಷಣೆ ಮಾಡಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂತರ ಗ್ರಾಮಸ್ಥರೇ ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.