ರಾಯಚೂರು | ಹದಗೆಟ್ಟ ಡಿ.ರಾಂಪೂರ-ಎರಗುಂಟ ಸಂಪರ್ಕ ರಸ್ತೆ ; ಗ್ರಾಮಸ್ಥರ ಆಕ್ರೋಶ
Update: 2025-09-06 21:47 IST
ರಾಯಚೂರು : ರಾಯಚೂರು ತಾಲೂಕಿನ ಶಾಖವಾದಿಯಿಂದ ಡಿ.ರಾಂಪೂರಗೆ ಹೋಗುವ ರಸ್ತೆ ಮಳೆಯಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದರೂ ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಡಿ.ರಾಂಪೂರ ರಸ್ತೆ ಹಾಳಾಗಿ ವರ್ಷವಾಗುತ್ತಾ ಬಂದರೂ ದುರಸ್ತಿ ಮಾಡದಿರುವುದು ಈ ಭಾಗದ ಗ್ರಾಮಸ್ಥರ ದುರಂತ ಎಂದು ಕಲ್ಯಾಣ ಕರ್ನಾಟಕ ರೈತ ಸಂಘಟನೆಯ ಮುಖಂಡ ರಂಗನಾಥ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.