×
Ad

ರಾಯಚೂರು | ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಬೊಲೆರೊ ಢಿಕ್ಕಿ : ನಾಲ್ವರು ಮೃತ್ಯು, ಹಲವರಿಗೆ ಗಾಯ

Update: 2025-04-18 09:01 IST

ಸಾಂದರ್ಭಿಕ ಚಿತ್ರ

ರಾಯಚೂರು : ಜಿಲ್ಲೆಯ ದೇವದುರ್ಗ‌ ತಾಲೂಕಿನ ಅಮರಾಪುರ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಹಳ್ಳದ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರ ಹೆಸರು ಇನ್ನೂ ತಿಳಿದುಬಂದಿಲ್ಲ. ನಾಗರಾಜ, ನಾಗಭೂಷಣ, ಮುರುಳಿ, ಆನಂದ ಎಂಬವರನ್ನು ತೀವ್ರ ಗಾಯಗೊಂಡ ಹಿನ್ನಲೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತಗೊಳ್ಳಗಾದ ಗಾಯಾಳುಗಳು ಹಾಗೂ ಮೃತರು ತೆಲಂಗಾಣ ರಾಜ್ಯದ ಹಿಂದೂಪುರ ನಿವಾಸಿಗಳು ಎಂದು ಹೇಳಲಾಗಿದೆ.

ತೆಲಂಗಾಣದ ರಾಜ್ಯದ ಹಿಂದೂಪುರ ಗ್ರಾಮದಿಂದ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣಕ್ಕೆ ಕುರಿ ವ್ಯಾಪಾರಕ್ಕಾಗಿ ತೆರಳಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರು ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ.

ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News