×
Ad

ರಾಯಚೂರು | ನ.9ರಂದು ಹೊಸಮನಿ ಪ್ರಕಾಶನದಿಂದ ನೃಪತುಂಗ ಪ್ರಶಸ್ತಿ ಪ್ರಧಾನ

Update: 2025-11-07 22:45 IST

ರಾಯಚೂರು: ಹೊಸಮನಿ ಪ್ರಕಾಶನ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.9ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶನದ ಪ್ರಧಾನ ಕಾರ್ಯದರ್ಶಿ ಶಿಫಾ ಹೊಸಮನಿ ಹೇಳಿದರು.

ಅವರಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವು ಆರಂಭವಾಗಲಿದ್ದು, ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ಶಿಕ್ಷಣ ತಜ್ಞ ರಾಮಣ್ಣ ಹವಳೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎಲ್.ಗೋಪಿ ಹಾಗೂ ಜಿಲ್ಲಾ ಸ್ಕೌಟ್, ಗೈಡ್ಸ್ ತರಬೇತಿದಾರರು ಹಾಗೂ ಶಿಕ್ಷಕಿ ಶಂಶಾದ್‌ ಬೇಗಂ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನೃಪತುಂಗ ಪ್ರಶಸ್ತಿಯನ್ನು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಹಿರಿಯ ಸಾಹಿತಿಗಳಾದ ಬಾಬು ಭಂಡಾರಿಗಲ್, ಅಯ್ಯಪ್ಪಯ್ಯ ಹುಡಾ, ಬೀರಪ್ಪ ಶಂಬೋಜಿ, ಗಡಿನಾಡು ಕನ್ನಡಿಗರ ಸಂಘದ ರಾಮಲಿಂಗಪ್ಪ ಕುಣ್ಸಿ, ಶಿಕ್ಷಕ ಸೈಯದ್ ಗೌಸ್ ಮೊಹಿನುದ್ದಿನ್ ಪೀರ್‍ಜಾದೆ, ಪರಿಸರ ಪ್ರೇಮಿ ಈರಣ್ಣ ಕೋಸಗಿ ಹಾಗೂ ಸಂಗೀತ ಕ್ಷೇತ್ರದ ವೀರೇಂದ್ರಕುಮಾರ ಕುರ್ಡಿ, ಪತ್ರಕರ್ತರಾದ ರಘುನಾಥ ರೆಡ್ಡಿ, ಮಹೆಬೂಬ್ ಪಾಷಾ, ಅಣ್ಣಪ್ಪ ಮೇಟಿ, ಹೋರಾಟಗಾರರಾದ ಎಂ.ಆರ್ ಭೇರಿ, ಹೆಚ್.ಪದ್ಮಾ, ಕಲಾವಿದರಾದ ವಿಕ್ರಮರಾಜಾ, ವೇಣು ಜಾಲಿಬೆಂಚಿ, ಸೋನಮ್ಮ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾ ವಿತರಕ ದತ್ತಾತ್ರೇಯ, ಮಾರೆಪ್ಪ, ಗುರುಲಿಂಗಪ್ಪ, ಶಾಂತಕುಮಾರ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಕಾಶನದ ಅಧ್ಯಕ್ಷ ಬಶೀರ ಅಹ್ಮದ್ ಹೊಸಮನಿ, ಉಪಾಧ್ಯಕ್ಷೆ ಪರ್ವಿನ್ ಬೇಗಂ, ರಫೀಕ್, ಆರ್.ಶಿವಮ್ಮ, ಮಹೇಂದ್ರಸಿಂಗ್ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News