ರಾಯಚೂರು | ಮಡಿವಾಳ ಸಮಾಜದವರು ಉಪ ಜಾತಿ ಕಾಲಂನಲ್ಲಿ ʼಮಡಿವಾಳʼ ಬರೆಸಲು ಮನವಿ
ರಾಯಚೂರು: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿಗೆ ಮುಂದಾಗಿದ್ದು, ಸೆ.22 ರಿಂದ ಪ್ರಾರಂಭವಾಗುವ ಗಣತಿಯಲ್ಲಿ ಮಡಿವಾಳ ಸಮಾಜದ ಎಲ್ಲ ಉಪಜಾತಿಗಳು ಮಡಿವಾಳ ಎಂದು ಬರೆಸುವಂತೆ ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ಮಂಜಪ್ಪ ಮನವಿ ಮಾಡಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಗಣತಿಯಲ್ಲಿ 9ಎ ಕ್ರಮಸಂಖ್ಯೆ 903 ರಲ್ಲಿ ಹಿಂದೂ ಮಡಿವಾಳ ಎಂದು ನಮೂದಿಸಬೇಕು. ಮಡಿವಾಳ ಸಮಾಜವನ್ನು ಅಗಸರ, ಪನಿತ, ಸಾಲಿಯಾನ್, ಹೊಣ್ಣ, ಸಾಂಕ್ಲಿ ಎಂದೆಲ್ಲ ವಿವಿಧ ಜಿಲ್ಲೆಗಳಲ್ಲಿ ಕರೆಯುತ್ತಿದ್ದು ಮಡಿವಾಳ ಎಂದು ನಮೂದಿಸಬೇಕು. ಈ ಹಿಂದೆ ಶಾಶ್ವತ ಆಯೋಗ ಮಾಡಿರುವ ಗಣತಿಯಲ್ಲಿ ತಪ್ಪು ಮಾಹಿತಿಗಳಿವೆ. ಸರಿ ಸುಮಾರು 8ವರೆ ಲಕ್ಷ ಜನರು ಮಡಿವಾಳ ಸಮಾಜದ ಜನರಿದ್ದಾರೆ. ಎಲ್ಲರು ಮಡಿವಾಳ ಎಂದು ನಮೂದಿಸಬೇಕೆಂದರು.
24 ಅಂಶಗಳ ಮಾಹಿತಿಯನ್ನು ಗಣತಿದಾರರಿಗೆ ನಿಖರವಾಗಿ ಮಾಹಿತಿ ನೀಡಬೇಕು. ಗಣತಿಯಲ್ಲಿ ಮಡಿವಾಳ ಕ್ರಿಶ್ಚಿಯನ್ ಎಂದು ನಮೂದಿಸಿರುವುದನ್ನು ಆಕ್ಷೇಪಿಸಿ, ಈಗಾಗಲೇ ದೂರು ನೀಡಲಾಗಿದೆ. ಮತಾಂತರಗೊಂಡ ಮಡಿವಾಳ ಸಮೂದಾಯವವರಿಲ್ಲ. ಸಮಾಜದ ಸಂಖ್ಯೆ ಕಡಿಮೆ ಮಾಡುವ ಕೆಲಸ ನಡೆದಿರುವ ಕುರಿತು ಆಕ್ಷೇಪಣೆ ಸಲ್ಲಿಸಲಾಗಿದ್ದು, ತೆಗೆಯುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಜಂಬಣ್ಣ ಯಕ್ಲಾಸಪುರು ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಮುಖಂಡರುಗಳಾದ ಜಿ.ಶಿವಮೂರ್ತಿ, ಎ.ಎಲ್.ವೆಂಕಟೇಶ, ಟಿ,ಮಲ್ಲೇಶ, ಎಚ್.ಮುನಿಸ್ವಾಮಿ, ಮಂಜುನಾಥ, ಪರಶುರಾಮ, ಜಮುನಾ ಕೇಶವ, ವೆಂಕಟೇಶ ಇದ್ದರು