ರಾಯಚೂರು: ಜೂ.24 ರಂದು ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಬೃಹತ್ ಅರಿವು ಕಾರ್ಯಕ್ರಮ
ರಾಯಚೂರು: ಮುಸ್ಲಿಂ ಪೆರ್ಸನಲ್ ಲಾ ಬೋರ್ಡ್ ವತಿಯಿಂದ ದಿ. 24 ರಂದು ಸಾಯಂಕಾಲ 7.30 ಕ್ಕೆ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕಾಯ್ದೆಯ ಬೃಹತ್ ಅರಿವು ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ರಾಯಚೂರು ಮುಸ್ಲಿಂ ಒಕ್ಕೂಟದ ಮುಖಂಡ ಶಬ್ಬೀರ್ ಅಹ್ಮದ್ ಹೌದಾಡಿ ಹೇಳಿದರು.
ನಗರದ ಪತ್ರಕಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆಯ ಮುಸ್ಲಿಮರಿಗೆ ಕರಾಳ ಕಾಯ್ದೆಯಾಗಿದೆ. ಸಮುದಾಯದ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುತ್ತದೆ, ಇದೊಂದು ಪಕ್ಷಪಾತ ಸ್ವರೂಪದ ಕಾಯ್ದೆಯಾಗಿದೆ, ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರನ್ನು ಮತ್ತು ಸರ್ಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳನ್ನು ನೇಮಿಸುವ ಮೂಲಕ ಧಾರ್ಮಿಕ ತಾರತಮ್ಯ ಮಾಡುತ್ತದೆ, ದೇಶದ ಎಲ್ಲಾ ಪ್ರಜ್ಞಾವಂತ ನಾಗರಿಕರು ಬುದ್ದಿಜೀವಿಗಳು, ಇದನ್ನು ವಿರೋಧಿಸಲೇ ಬೇಕೆಂದರು. ಇದು ಸಂವಿಧಾನದ ವಿರೋಧಿ ನಡೆಯಾಗಿದೆ. ಕೇಂದ್ರ ಸರಕಾರದ ನಡೆಯನ್ನು ಸಂವಿಧಾನ ಪರವಾಗಿರುವ ಎಲ್ಲಾ ಧರ್ಮ,ಜಾತಿ,ಭಾಷೆ ಜನರು ವಿರೋಧಿಸಬೇಕೆಂದರು.
ಭಾರತದಂತಹ ಜಾತ್ಯತೀತ, ಪ್ರಜಾಸತ್ತಾತ್ಮಕ, ಧರ್ಮ ನಿರಪೇಕ್ಷ ದೇಶದ ಒಂದು ಸಮುದಾಯವನ್ನು ಗುರಿಯಾಗಿಸಿ ಈ ಕಾಯ್ದೆ ರೂಪಿಸಿದಂತಿದೆ. ಇದು ದೇಶದ ನಾಗರಿಕರಲ್ಲಿ ಪರಸ್ಪರ ತಾರತಮ್ಯ ಮೂಡಿಸುವ ಮತ್ತು ಮತ್ತು ವಿವಿಧತೆಯಲ್ಲಿ ಏಕತೆ ಇರುವ ನಮ್ಮ ದೇಶದ ಸಂವಿಧಾನದ ವಿರುದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಹಮ್ಮದ್ ಮೌಲಾನ ಖಾಲೀದ್ ಸೈಫುಲಾ ರಹ್ಮಾನಿ ಸಾಹೇಬ್, ಅಧ್ಯಕ್ಷರು ಅಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್. ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಹಜರತ್ ಡಾ.ಸೈಯದ್ ಷಾ ಅಲಿ ಅಲ್ ಹುಸೇನಿ, ಅಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯರು ಹಾಗು ಹೈದ್ರಾಬಾದ್ ತೆಲಂಗಾಣ ಸಂಸದ ಅಸದುದ್ದೀನ್ ಓವೈಸಿ, ಹಾಮಿದ್ ಮೊಹಮ್ಮದ್ ಖಾನ್ ಹೈದ್ರಾಬಾದ್, ತೆಲಂಗಾಣ, ಬೆಂಗಳೂರು ಮೂಲದ ಸ್ವತಂತ್ರ ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಶಿವ ಸುಂದರ್ ಆಗಮಿಸಲಿದ್ದಾರೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅಸಿಮ್ ಅಖ್ತರ್, ಖಾಜಾ ಅಸ್ಲಂ, ಸೈಯದ್, ಮುರ್ಷಿದ್ ಜಾನಿ, ಮೊಹಮ್ಮದ್ ವಾಲಿ, ಮೊಹಮ್ಮದ್ ಹಫೀಜ್ ನಿಝಾಮುದ್ದೀನ್, ಮೌಲಾನ ಅಬ್ದುಲ್, ಮೊಹ್ಮದ್ ಏಜಾಝ್ ಅಲಿ, ಶಹಾಬಾಜ್ ಖಾನ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.