×
Ad

ರಾಯಚೂರು | ರಥೋತ್ಸವಕ್ಕೆ ಮುಸ್ಲಿಮರಿಂದ 2 ಲಕ್ಷ ರೂ. ದೇಣಿಗೆ

Update: 2025-10-29 23:50 IST

ರಾಯಚೂರು : ಲಿಂಗಸುಗೂರು ತಾಲೂಕಿನ ಕಸಬಾಲಿಂಗಸುಗೂರು ಗ್ರಾಮದ ಕುಪ್ಪಿ ಭೀಮದೇವರ ರಥೋತ್ಸವಕ್ಕೆ ಗ್ರಾಮದ ಮುಸ್ಲಿಮರು 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಗ್ರಾಮದ ಕುಪ್ಪಿಭೀಮ ದೇವರ ರಥೋತ್ಸವಕ್ಕೆ 100 ವರ್ಷ ತುಂಬಿದ್ದರಿಂದ ಡಿಸೆಂಬರ್‌ನಲ್ಲಿ ನಡೆಯುವ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ಗ್ರಾಮದ ಮುಖಂಡರು ತೀರ್ಮಾನಿಸಿದ್ದರು. ಗ್ರಾಮದ ಎಲ್ಲ ಸಮುದಾಯದಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಮ್ ಮುಖಂಡರು 2 ಲಕ್ಷ ರೂ. ದೇಣಿಗೆಯನ್ನು ದೇವಸ್ಥಾನದ ಸಮಿತಿ ಕಾರ್ಯದರ್ಶಿಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಯೂಸುಫ್ ಡ್ರೈವರ್, ಬಂದೇನವಾಝ್, ಖಾಜಾಸಾಬ್ ಬಾಗವಾನ್, ಅಲ್ಲಾಸಾಬ್ ಬಾಗವಾನ್, ಖಾಜಾಸಾಬ್ ಸುಬಾನ್, ಬಾಗವಾನ್, ರಾಮಯ್ಯ ಗುತ್ತೇದಾರ, ಸೂಗಯ್ಯ ಸ್ವಾಮಿ ಅತ್ತನೂರು, ಅಮರೇಶ ಹೊರಪೇಟಿ, ರಮೇಶ್ ತಲೆವಡಕರ, ಕುಪ್ಪನಗೌಡ ಮೇಲ್ಮನೆ, ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News