×
Ad

ರಾಯಚೂರು | ಐಟಾ ಅಧ್ಯಕ್ಷರಾಗಿ ನೂರುದ್ದೀನ್ ಆಯ್ಕೆ

Update: 2025-02-23 19:53 IST

ರಾಯಚೂರು : ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ರಿ) ಸಿಂಧನೂರು ತಾಲೂಕು ಘಟಕದ ಅಧ್ಯಕ್ಷರಾಗಿ ಪಾಟೀಲ್ ಕಾಲೇಜಿನ ಉಪನ್ಯಾಸಕ ನೂರುದ್ದೀನ್ ಆಯ್ಕೆಯಾಗಿದ್ದಾರೆ.

ಅಸೋಸಿಯೇಶನ್ ರಾಜ್ಯದ ಸದಸ್ಯ ಸಲೀಮ್ ಸಾಬ್ ಅವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. ಕಾರ್ಯದರ್ಶಿ ಯಾಗಿ ದೈಹಿಕ ಶಿಕ್ಷಣ ಶಿಕ್ಷಕ ಮೋದಿನ ಸಾಬ್,‌ ಸಹ‌ ಕಾರ್ಯದರ್ಶಿಯಾಗಿ ಅಬೂಲೈಸ್ ನಾಯ್ಕ ಮತ್ತು ತನ್ವೀರ್ ಅಹ್ಮದ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ಖಾಸಿಂ ಖುರೇಶಿ ಅವರನ್ನು ಆಯ್ಕೆ ಮಾಡಲಾಯಿತು.

ಸಿಂಧನೂರು ತಾಲೂಕು ಮಹಿಳಾ ಸಂಚಾಲಕಿಯಾಗಿ ಶಾಜಿಯಾ ಬೇಗಮ್, ಕಾರ್ಯದರ್ಶಿಯಾಗಿ ಮುಬೀನಾ ಹಾಗೂ ಸಮೀನ್ ಬೇಗಂ ಆಯ್ಕೆ ಮಾಡಲಾಯಿತು.

ಅಖಿಲ ಭಾರತ ಆದರ್ಶ ಶಿಕ್ಷಕರ ಸಂಘ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಭಾರತದಾದ್ಯಂತ ಶಿಕ್ಷಕರ ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಲು ಮೀಸಲಾಗಿರುವ ವೃತ್ತಿಪರ ಸಂಸ್ಥೆಯಾಗಿದೆ.

ದೇಶದಲ್ಲಿ ಶಿಕ್ಷಕರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಪ್ರತಿಪಾದಿಸುವ ಮೂಲಕ ಕೆಲಸ ಮಾಡುವ ಗುರಿಯನ್ನು ಹೊಂದಿದೆ. ವೃತ್ತಿಪರ ಅಭಿವೃದ್ಧಿಯನ್ನು ಉತ್ತೇಜಿಸುವುದು, ಆದರ್ಶಪ್ರಾಯ ಬೋಧನಾ ಅಭ್ಯಾಸಗಳನ್ನು ಗುರುತಿಸುವುದು ಮತ್ತು ಸಮಾಜದಲ್ಲಿ ಶಿಕ್ಷಕರ ನಿರ್ಣಾಯಕ ಪಾತ್ರದ ಬಗ್ಗೆ ಅರಿವು ಮೂಡಿಸು‌ವ‌ ಕೆಲಸವಾಗುತ್ತಿದೆ. ಶಿಕ್ಷಣ ಸುಧಾರಣೆಗೆ ಸಮ್ಮೇಳನಗಳು, ಕಾರ್ಯಾಗಾರಗಳು, ಸ್ಪರ್ಧೆಗಳು ಮತ್ತು ಶಿಕ್ಷಣದ ಅಭಿವೃದ್ಧಿಗೆ ಅನೇಕ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News