ರಾಯಚೂರು | ಲೋಕಾಯುಕ್ತರ ಆದೇಶ ಪಾಲಿಸದ ಅಧಿಕಾರಿಗಳನ್ನು ವಜಾಗೊಳಿಸಿ : ಅಳ್ಳಪ್ಪ ಅಮರಾಪುರ
ರಾಯಚೂರು: ಉಪ ಲೋಕಾಯುಕ್ತರು ಸೂಚನೆ ನೀಡಿ ತಿಂಗಳುಗಳು ಗತಿಸಿದರೂ ದೇವದುರ್ಗ ರಸ್ತೆ ಅಗಲೀಕರಣ ನಡೆಸದ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಅಳ್ಳಪ್ಪ ಅಮರಾಪುರು ಆಗ್ರಹಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ದೇವದುರ್ಗ ಪುರಸಭೆಯಿಂದ 2010ರಲ್ಲಿ ದೇವದುರ್ಗ ಪಟ್ಟಣದ ಅಮರೇಶ ಬಲ್ಲಿದವ ಇವರ ಮನೆಯಿಂದ ಮಿನಿ ವಿಧಾನಸೌಧವರಗೆ 25 ಅಡಿ ರಸ್ತೆ ಅಗಲೀಕರಣಕ್ಕೆ ಪುರಸಭೆ ನಿರ್ಣಯಿಸಿತ್ತು. ಯಾವುದೇ ರಸ್ತೆ ಅಗಲೀಕರಣ ನಡೆಸದೇ ಇರುವುದರಿಂದ 2014 ಸೆ.9 ರಂದು ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. 11 ವರ್ಷಗಳಾದರೂ ಲೋಕಾಯುಕ್ತರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
2025ರ ಆ.30ರಂದು ರಾಯಚೂರು ನಗರಕ್ಕೆ ಆಗಮಿಸಿದ್ದ ಉಪ ಲೋಕಾಯುಕ್ತ ವೀರಣ್ಣ ಇವರು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಅರ್ಜಿ ವಿಚಾರಣೆ ನಡೆಸಿ 90 ದಿನಗಳಲ್ಲಿ ರಸ್ತೆ ಅಗಲೀಕರಣ ಮಾಡುವಂತೆ ಆದೇಶಿಸಿದ್ದರು. ಸಭೆಗೆ ಹಾಜರಾಗಿದ್ದ ಯೋಜನಾಧಿಕಾರಿ ಈರಣ್ಣ ಬಿರಾದಾರ ಮತು ಪುರಸಭೆ ಮುಖ್ಯಾಧಿಕಾರಿ ಹಂಪಣ್ಣಿವರಿಗೆ ಸೂಚನೆ ನೀಡಿದ್ದರು. ಆದರೂ ಇಂದಿಗೂ ರಸ್ತೆ ಅಗಲೀಕರಣ ಮಾಡಿಲ್ಲ. ಲೋಕಾಯುಕ್ತ ಆದೇಶಗಳನ್ನೇ ಪಾಲಿಸದೇ ಇರುವ ಅಧಿಕಾರಿಗಳು ಅಗೌರವ ಪ್ರದರ್ಶಿಸಿದ್ದಾರೆ. ರಾಜ್ಯ ಸರ್ಕಾರ ಬೇಜವಬ್ದಾರಿ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಅಮಾನತು ಗೊಳಿಸಬೇಕೆಂದರು.